ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ರುದ್ರನರ್ತನ ಮುಂದುವರೆಸಿದೆ. ಮತ್ತೆ 6 ಜನರು ಮೃತಪಟ್ಟಿದ್ದು, 283 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಕೊರೊನಾ ರುದ್ರನರ್ತನ : ಆರು ಜನರ ಸಾವು - kalburgi latest news
ನಗರದಲ್ಲಿ ಕೊರೊನಾಗೆ ಆರು ಜನರು ಪ್ರಾಣ ಕಳೆದುಕೊಂಡಿದ್ದು, ಮೃತರ ಸಂಖ್ಯೆ 72 ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಾಗಾಲೋಟದಲ್ಲಿ ಹೆಚ್ಚಾಗುತ್ತಲೇ ಇದೆ.
ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹದಿಂದ ಬಳಲುತ್ತಿದ್ದ ಕಲಬುರಗಿ ನಗರದ ರಾಘವೇಂದ್ರ ಕಾಲೋನಿಯ 89 ವರ್ಷದ ವೃದ್ಧ. ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ಕಲಬುರಗಿ ನಗರದ ಮೆಕ್ಕಾ ಕಾಲೋನಿಯ 56 ವರ್ಷದ ಪುರುಷ, ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ಕಲಬುರಗಿಯ ತಾಜ್ ನಗರದ 65 ವರ್ಷದ ವೃದ್ಧ, ತೀವ್ರ ಉಸಿರಾಟ ತೊಂದರೆ ಜೊತೆಗೆ ಅಧಿಕ ರಕ್ತದೊತ್ತಡ ಹಾಗೂ ಬಳಲುತ್ತಿದ್ದ ಕಲಬುರಗಿ ನಗರದ ಹೀರಾಪುರ ಕ್ರಾಸ್ ನಿವಾಸಿ 68 ವರ್ಷದ ವೃದ್ಧ ಹಾಗೂ ಕಲಬುರಗಿಯ ವಿದ್ಯಾನಗರದ 43 ವರ್ಷದ ಪುರುಷ, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಂಡಗಿಯ 60 ವರ್ಷದ ವೃದ್ಧೆ ಸಾವಿಗೀಡಾದವರು.
ಸೋಂಕಿತರ ಸಂಖ್ಯೆ 4778ಕ್ಕೆ ಏರಿಕೆಯಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2310. ಮೃತರ ಸಂಖ್ಯೆ 72 ಕ್ಕೆ ಏರಿಕೆಯಾಗಿದೆ. 2396 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.