ಕಲಬುರಗಿ:ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಇಂದು ಹೊಸದಾಗಿಆರು ತಿಂಗಳ ಹೆಣ್ಣು ಮಗು ಸೇರಿದಂತೆ 6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕಲಬುರಗಿಯಲ್ಲಿ ಇಂದು 6 ತಿಂಗಳ ಮಗು ಸೇರಿ 6 ಮಂದಿಗೆ ಕೊರೊನಾ ದೃಢ! - corona news in kalburgi
ಕಲಬುರಗಿ ಜಿಲ್ಲೆಯಲ್ಲಿ 24, 22, 24, 27 ವರ್ಷದ ಮಹಿಳೆಯರು ಮತ್ತು 29 ವರ್ಷದ ಪುರುಷ ಹಾಗೂ ಆರು ತಿಂಗಳ ಹೆಣ್ಣು ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕಲಬುರಗಿಯಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ
24, 22, 24, 27 ವರ್ಷದ ಮಹಿಳೆಯರು ಮತ್ತು 29 ವರ್ಷದ ಪುರುಷ ಹಾಗೂ ಆರು ತಿಂಗಳ ಹೆಣ್ಣು ಮಗುವಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರೆಲ್ಲರೂ ಇತ್ತೀಚೆಗೆ ಮಹಾರಾಷ್ಟ್ರದಿಂದ ಕಲಬುರಗಿಗೆ ಆಗಮಿಸಿದ್ದರು. ಸೋಂಕಿತರಿಗೆ ನಿಗದಿತ ಕೋವಿಡ್-19 ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.