ಕಲಬುರಗಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಇಂದು ಒಂದೇ ದಿನಕ್ಕೆ ಆರು ಪ್ರಕರಣಗಳು ಬೆಳಕಿಗೆ ಬಂದಿವೆ.
ಕಲಬುರಗಿಯಲ್ಲಿಂದು ಆರು ಕೊರೊನಾ ಪ್ರಕರಣ ದೃಢ - Six coronavirus infection detected
ಇಂದು ಜಿಲ್ಲೆಯಲ್ಲಿ ಬೆಳಗ್ಗೆ ಮೂರು ಪ್ರಕರಣ ದೃಢಪಟ್ಟರೆ, ಮತ್ತೆ ಈಗ ಮೂರು ಪ್ರಕರಣ ದೃಢಪಟ್ಟಿದೆ. ಇಂದು ಒಂದೇ ದಿನ ಆರು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ.

ಕಲಬುರಗಿಯಲ್ಲಿಂದು ಆರು ಕೊರೊನಾ ಸೋಂಕು ಪತ್ತೆ
ಜಿಲ್ಲೆಯಲ್ಲಿ ಬೆಳಗ್ಗೆ ಮೂರು ಪ್ರಕರಣ ದೃಢಪಟ್ಟರೆ, ಮತ್ತೆ ಈಗ ಮೂರು ಪ್ರಕರಣ ದೃಢಪಟ್ಟಿವೆ. ಇಂದು ಒಂದೇ ದಿನಕ್ಕೆ ಆರು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ.
35 ವರ್ಷದ ಮಹಿಳೆ, 78 ವರ್ಷದ ಪುರುಷ ಹಾಗೂ 22 ವರ್ಷದ ಯುವಕನಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಸದ್ಯ ಮೂವರ ಟ್ರಾವೆಲ್ ಹಿಸ್ಟರಿ ಸಿಕ್ಕಿಲ್ಲ. ಸೋಂಕಿತರಿಗೆ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಿಗ್ಗೆ ಮೂರು ಪಾಸಿಟಿವ್ ಬಂದಿದ್ದವು. ಇದೀಗ ಮತ್ತೆ ಮೂರು ಪಾಸಿಟಿವ್ ವರದಿಯಾಗಿದೆ. ಒಂದೇ ದಿನ ಆರು ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.