ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಇಂದು ಆರು ಕೊರೊನಾ ಹೊಸ ಪ್ರಕರಣ ಪತ್ತೆ - ಕಲಬುರಗಿಯಲ್ಲಿ ಇಂದು ಆರು ಕೊರೊನಾ ಪ್ರಕರಣ ಪತ್ತೆ

ಕಲಬುರಗಿಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇಂದು ಆರು ಜನರಿಗೆ ಸೋಂಕು ತಗುಲುವ ಮೂಲಕ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.

Six corona cases registered in Kalburgi
ಕಲಬುರಗಿಯಲ್ಲಿ ಇಂದು ಆರು ಕೊರೊನಾ ಪ್ರಕರಣ ಪತ್ತೆ

By

Published : May 24, 2020, 3:21 PM IST

ಕಲಬುರಗಿ:ಜಿಲ್ಲೆಯಲ್ಲಿ ಇಂದು ಆರು ಜನರಿಗೆ ಕೊರೊನಾ ಪಾಸಿಟಿವ್​ ಬಂದಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾಗಿರುವ ಪ್ರಕರಣಗಳಲ್ಲಿ ಐದು ಜನ ಮುಂಬೈ ವಲಸಿಗರಾಗಿದ್ದು, ಆಂಧ್ರಪ್ರದೇಶದಿಂದ ಬಂದಿದ್ದ ಓರ್ವ ವ್ಯಕ್ತಿಗೆ ಸೋಂಕು ತಗುಲಿದೆ.

ಸೋಂಕಿತರ ಮಾಹಿತಿ:

  • ಮುಂಬೈಯಿಂದ ವಾಪಸಾದ ರೋಗಿ ನಂ-1965 (32) ಪುರುಷ
  • ರೋಗಿ ನಂ-1966 (20) ಯುವಕ
  • ರೋಗಿ ನಂ-1967 (48) ಪುರುಷ
  • ರೋಗಿ ನಂ-1968 (50) ಮಹಿಳೆ
  • ರೋಗಿ ನಂ-2000 (45) ಪುರುಷ
  • ಆಂಧ್ರದಿಂದ ವಾಪಸಾದ ರೋಗಿ ನಂ-2001 (30) ಪುರುಷ

ಸೊಂಕಿತರೆಲ್ಲರಿಗೂ ಇಎಸ್​​ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದ 60 ಜನ ಗುಣಮುಖರಾಗಿದ್ದಾರೆ. ಒಟ್ಟು ಏಳು ಜನ ಸಾವುನ್ನಪ್ಪಿದ್ದು, ಇನ್ನುಳಿದ 74 ಜನ ಸೋಂಕಿತರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details