ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್‌ಬಿಆರ್ ವಸತಿ ಪಬ್ಲಿಕ್ ಶಾಲೆಯ ಸುವರ್ಣ ಮಹೋತ್ಸವ, ಎಸ್‌ಬಿಆರ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಬೆಳ್ಳಿ ಮಹೋತ್ಸವ ಸಮಾರಂಭ ಅದ್ಧೂರಿಯಾಗಿ ಜರುಗಿತು.
ಎಸ್‌ಬಿಆರ್ ಕಾಲೇಜಿನಲ್ಲಿ ಅದ್ಧೂರಿ ಬೆಳ್ಳಿ ಮಹೋತ್ಸವ ಸಮಾರಂಭ - ಕಲಬುರಗಿಯ ಎಸ್‌ಬಿಆರ್ ವಸತಿ ಪಬ್ಲಿಕ್ ಶಾಲೆಯ ಸುವರ್ಣ ಮಹೋತ್ಸವ
ಕಲಬುರಗಿಯ ಎಸ್‌ಬಿಆರ್ ವಸತಿ ಪಬ್ಲಿಕ್ ಶಾಲೆಯ ಸುವರ್ಣ ಮಹೋತ್ಸವ, ಎಸ್‌ಬಿಆರ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಬೆಳ್ಳಿ ಮಹೋತ್ಸವ ಸಮಾರಂಭ ಅದ್ಧೂರಿಯಾಗಿ ಜರುಗಿತು.
ಎಸ್‌ಬಿಆರ್ ಕಾಲೇಜಿನಲ್ಲಿ ಅದ್ಧೂರಿ ಬೆಳ್ಳಿ ಮಹೋತ್ಸವ
ಶರಣಬಸವೇಶ್ವರ ಶಾಲೆಯ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸಪ್ಪ ಉದ್ಘಾಟಿಸಿದರು. ಕಾರ್ಯಕ್ರಮ ಎರಡು ದಿನ ನಡೆಯಲ್ಲಿದ್ದು, ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಯೋಗ, ಕರಾಟೆ ಹಾಗೂ ಮಲ್ಲಕಂಬ ಸ್ಪರ್ಧೆಗಳು ನಡೆಯುತ್ತಿವೆ.
ಈ ಸಂದರ್ಭದಲ್ಲಿ ಸುಲಫಲ ಮಠದ ಶಾಂತ ಶಿವಾಚಾರ್ಯ ಸ್ವಾಮೀಜಿ, ಬೀದರ್ನ ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ದತ್ತಾತ್ರೇಯ ಪಾಟೀಲ್ ರೆವೂರ್, ಡಾ. ಅಜಯಸಿಂಗ್ ಮತ್ತಿತರರು ಉಪಸ್ಥಿತರಿದ್ದರು.