ಕಲಬುರಗಿ:ರಾಜ್ಯದಲ್ಲಿ ಮುಸಲ್ಮಾನರ ಅಟ್ಟಹಾಸ ಮಿತಿಮೀರಿದೆ. ಹಿಂದೂ ಯುವಕರ ಮೇಲೆ ಕೊಲೆ ಎಂಬ ಅಸ್ತ್ರವನ್ನು ನಿರಂತರವಾಗಿ ಬಳಸಲಾಗುತ್ತಿದೆ. ಮುಸ್ಲಿಂ ಸಮುದಾಯದ ಯುವತಿಯನ್ನು ಪ್ರೀತಿ ಮಾಡಿದ ಎಂಬ ಏಕೈಕ ಕಾರಣಕ್ಕೆ ದಲಿತ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. 6 ತಿಂಗಳ ಹಿಂದೆ ಕೊಲೆಯಾದ ಯುವಕನಿಗೆ ಯುವತಿಯ ಸಹೋದರ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ, ಆಂದೋಲ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ.
ಜಿಲ್ಲೆಯ ವಾಡಿ ಪಟ್ಟಣದಲ್ಲಿ ಮೇ.25ರಂದು ನಡೆದ ದಲಿತ ಯುವಕನ ಕೊಲೆ ಪ್ರಕರಣದ ಕುರಿತು ಅವರು ಆಕ್ರೋಶ ಹೊರಹಾಕಿದರು. ಆರೋಪಿಗಳು ಹೊಂಚುಹಾಕಿ ವಿಜಯನನ್ನು ನಡು ರಸ್ತೆಯಲ್ಲೇ ಕೊಲೆ ಮಾಡಿದ್ದಾರೆ. ಕರ್ನಾಟಕ ಮಾತ್ರವಲ್ಲ ದೇಶದಾದ್ಯಂತ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಲವ್ ಜಿಹಾದ್ ಹೆಸರಿನಲ್ಲಿ ಅವರ ಬದುಕನ್ನು ಹಾಳು ಮಾಡುತ್ತಾರೆ.