ಕಲಬುರಗಿ:ಹಿಜಾಬ್ ಗಲಾಟೆ ವಿಚಾರವಾಗಿ ಕಾಂಗ್ರೆಸ್ ಮುಖಂಡ ನೀಡಿದ್ದ ಪ್ರಚೋದನಕಾರಿ ಹೇಳಿಕೆಗೆ ಶ್ರೀ ರಾಮಸೇನಾ ರಾಜ್ಯ ಗೌರವಾಧ್ಯಕ್ಷ ಸಿದ್ದಲಿಂಗ ಶಿವಾಚಾರ್ಯರರು ತಿರುಗೇಟು ನೀಡಿದ್ದಾರೆ.
ಸೇಡಂ ಕಾಂಗ್ರೆಸ್ ಮುಖಂಡ ಮುಕ್ರಂಖಾನ್ ಹಿಜಾಬ್ ತಂಟೆಗೆ ಬಂದ್ರೆ ತುಂಡು ತುಂಡು ಮಾಡುತ್ತೀವಿ ಎಂಬ ಹೇಳಿಕೆ ನೀಡಿದ್ದಾರೆ. ಇಂಥವರನ್ನು ಭಾಷಣ ಮಾಡಲು ಬಿಟ್ಟರೆ ಸಮಾಜದಲ್ಲಿ ಅಂಶಾತಿ ಉಂಟಾಗುತ್ತದೆ. ಮುಕ್ರಂಖಾನ್ ಪ್ರಚೋದನಕಾರಿ ಭಾಷಣ ಮಾಡಿ ಮುಸ್ಲಿಂರನ್ನು ನಮ್ಮ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡ್ಡಿದ್ದಾರೆ. ಹೀಗಾಗಿ ಮುಕ್ರಂಖಾನ್ ಮೇಲೆ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಬೇಕು ಎಂದು ಆಗ್ರಹಿಸಿದ್ದಾರೆ.