ಕರ್ನಾಟಕ

karnataka

ETV Bharat / state

ಶ್ರೀಶರಣಬಸವ ವಿವಿ ಮೌಲ್ಯಮಾಪನ ವಿಭಾಗದ ಕುಲಸಚಿವ ಅಪಘಾತದಲ್ಲಿ ಸಾವು - ಶ್ರೀಶರಣಬಸವ ವಿವಿ ಕುಲಸಚಿವ ಸಾವು

ಬೀದರ್​​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕಲಬುರಗಿ ನಗರದ ಶ್ರೀಶರಣಬಸವ ಖಾಸಗಿ ವಿವಿಯ ಮೌಲ್ಯಮಾಪನ ವಿಭಾಗದ ಕುಲಸಚಿವರು ಸಾವನ್ನಪ್ಪಿದ್ದಾರೆ.

chancellor died in accident
ಕುಲಸಚಿವ ಸಾವು

By

Published : Sep 19, 2021, 8:30 PM IST

ಕಲಬುರಗಿ: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಶ್ರೀಶರಣಬಸವ ಖಾಸಗಿ ವಿವಿ ಮೌಲ್ಯಮಾಪನ ವಿಭಾಗದ ಕುಲಸಚಿವ ಲಿಂಗರಾಜ್ ಶಾಸ್ತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಬೀದರ್​​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ಬಳಿ ನಡೆದಿದೆ.

ಮರಕ್ಕೆ ಡಿಕ್ಕಿ ಹೊಡೆದ ಕಾರು ನಜ್ಜುಗುಜ್ಜು

ವಿಷಯ ತಿಳಿಯುತ್ತಿದ್ದಂತೆ ವಿವಿಯ ಪ್ರಾಧ್ಯಾಪಕ, ಸಿಬ್ಬಂದಿ ವರ್ಗ ಸ್ಥಳಕ್ಕೆ ಆಗಮಿಸಿದ್ದರು. ಅತಿ ವೇಗದಿಂದ ಕಾರು ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 'ವಿಡಿಯೋದಲ್ಲಿರುವುದು ನಾನಲ್ಲ, ವಿರೋಧಿಗಳು ನಿಷ್ಪಕ್ಷಪಾತ ವ್ಯಕ್ತಿತ್ವ ಹಾಳು ಮಾಡಲು ಇದನ್ನು ನಿರ್ಮಿಸಿದ್ದಾರೆ': ಡಿವಿಎಸ್

ABOUT THE AUTHOR

...view details