ಕಲಬುರಗಿ: ಉದ್ಯೋಗ ಅರಸಿ ಬಂದು ಲಾಕ್ಡೌನ್ಗೆ ಸಿಲುಕಿದ್ದ ಬಿಹಾರಿಗಳು ಬುಧವಾರ ರಾತ್ರಿ 8 ಗಂಟೆಗೆ ಶ್ರಮಿಕ್ ಎಕ್ಸ್‌ಪ್ರೆಸ್ ರೈಲು ಮೂಲಕ ಬಿಹಾರದತ್ತ ಪ್ರಯಾಣ ಬೆಳೆಸಿದರು.
ಕಲಬುರಗಿಯಿಂದ ಬಿಹಾರಕ್ಕೆ ಹೊರಟ ಶ್ರಮಿಕ್ ಎಕ್ಸ್‌ಪ್ರೆಸ್ ವಿಶೇಷ ರೈಲು
ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿರುವ ಬಿಹಾರದ ಸುಮಾರು 1,436 ನಿವಾಸಿಗಳು ಪ್ರಯಾಣಕ್ಕೆ ನೋಂದಣಿ ಮಾಡಿಕೊಂಡಿದ್ದು, ಬುಧವಾರ ತಮ್ಮ ರಾಜ್ಯಕ್ಕೆ ತೆರಳಿದ್ದಾರೆ. ಪ್ರತಿ ಪ್ರಯಾಣಿಕರಿಗೆ ಸ್ಕ್ರಿನಿಂಗ್ ಮಾಡಲಾಗಿದೆ. ಜಿಲ್ಲಾಡಳಿತದಿಂದ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ಶರತ್ ಬಿ. ತಿಳಿಸಿದರು.
ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿದ್ದ ಬಿಹಾರದ ಸುಮಾರು 1,436 ನಿವಾಸಿಗಳು ಪ್ರಯಾಣಕ್ಕೆ ನೋಂದಣಿ ಮಾಡಿಕೊಂಡಿದ್ದು, ಅವರೆಲ್ಲರು ಬುಧವಾರ ತಮ್ಮ ರಾಜ್ಯಕ್ಕೆ ತೆರಳಿದ್ದಾರೆ. ಪ್ರತಿ ಪ್ರಯಾಣಿಕರಿಗೆ ಸ್ಕ್ರಿನಿಂಗ್ ಮಾಡಲಾಗಿದೆ. ಜಿಲ್ಲಾಡಳಿತದಿಂದ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ಶರತ್ ಬಿ. ತಿಳಿಸಿದರು.
ಮೊನ್ನೆಯಷ್ಟೆ ಶ್ರಮಿಕ್ ಎಕ್ಸ್‌ಪ್ರೆಸ್ ರೈಲು ಸುಮಾರು 1,500 ಜನ ಕಾರ್ಮಿಕರನ್ನು ಕಲಬುರಗಿ ರೈಲ್ವೆ ನಿಲ್ದಾಣದಿಂದ ಉತ್ತರ ಪ್ರದೇಶಕ್ಕೆ ಕರೆದುಕೊಂಡು ಹೋಗಿತ್ತು. ಇದೀಗ ಕಲಬುರಗಿಯಿಂದ ಬಿಹಾರಕ್ಕೆ ಕರೆದುಕೊಂಡು ಹೋಗುತ್ತಿರುವ ಎರಡನೇ ಶ್ರಮಿಕ್ ಎಕ್ಸ್‌ಪ್ರೆಸ್ ರೈಲು ಇದಾಗಿದೆ. ಈ ರೈಲು ಶುಕ್ರವಾರ ಬಿಹಾರ ತಲುಪಲಿದೆ.