ಕರ್ನಾಟಕ

karnataka

ETV Bharat / state

ಕಲಬುರಗಿ ಬಿಜೆಪಿ ಮುಖಂಡನ ಕೊಲೆ ಪ್ರಕರಣ: ಜಿ.ಪಂ. ಸದಸ್ಯ ಸೇರಿ ಇಬ್ಬರ ಬಂಧನ

ಬಿಜೆಪಿ ಮುಖಂಡ, ಗುತ್ತಿಗೆದಾರ ಶಿವಲಿಂಗ ಬಾವಿಕಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸದಸ್ಯ ಶಾಂತಪ್ಪ ಕೂಡಲಗಿ ಮತ್ತು ಆತನ ಸಹೋದರ ಹನುಮಂತ ಕೂಡಲಗಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಲಿಂಗ ಬಾವಿಕಟ್ಟಿಯನ್ನು ಕೊಚ್ಚಿ ಕೊಲೆಗೈದ ಪ್ರಕರಣ....ಇದೀಗ ಸಹೋದರರಿಬ್ಬರ ಬಂಧನ

By

Published : Nov 19, 2019, 10:54 AM IST

ಕಲಬುರಗಿ:ಬಿಜೆಪಿ ಮುಖಂಡ ಗುತ್ತಿಗೆದಾರ ಶಿವಲಿಂಗ ಬಾವಿಕಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್​ ಸದಸ್ಯ ಶಾಂತಪ್ಪ ಕೂಡಲಗಿ ಮತ್ತು ಆತನ ಸಹೋದರ ಹನುಮಂತ ಕೂಡಲಗಿಯನ್ನು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 05 ರಂದು ಕಾರಿಗೆ- ಕಾರಿನಿಂದ ಡಿಕ್ಕಿ ಹೊಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಶಿವಲಿಂಗ ಬಾವಿಕಟ್ಟಿಯನ್ನು ಕೊಲೆಗೈಯಲಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐದು ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಕರಣದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಶಾಂತಪ್ಪ ಕೂಡಲಗಿ ಹಾಗೂ ಆತನ ಸಹೋದರ ಹನುಮಂತ ಕೂಡಲಗಿ ಹೆಸರು ಸಹ ಇರುವುದರಿಂದ ಇವರು ತಲೆಮರೆಸಿಕೊಂಡಿದ್ದರು. ಇವರ ಬಂಧನಕ್ಕೆ ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸುತ್ತಿತ್ತು. ಈ ನಡುವೆ ಶಾಂತಪ್ಪ ಕೂಡಲಗಿ ಅವರ ತಾಯಿ ಸಾಬವ್ವ ನಿನ್ನೆ ನಿಧನರಾದ ಹಿನ್ನಲೆ ಅಜ್ಞಾತ ಸ್ಥಳದಲ್ಲಿದ್ದ ಸಹೋದರಿಬ್ಬರಿಗೆ ಹೊರಬರುವುದು ಅನಿವಾರ್ಯವಾಗಿತ್ತು.

ನಿರೀಕ್ಷೆಯಂತೆ ನಿನ್ನೆ ಅಂತ್ಯಕ್ರಿಯೆಗೆ ಬಂದಿದ್ದ ಸಹೋದರರರಿಬ್ಬರನ್ನು ಜೇವರ್ಗಿ ತಾಲೂಕಿನ ಕೂಡಲಗಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details