ಸೇಡಂ :ತಾಲೂಕು ಮತ್ತು ಮುಧೋಳ ಬ್ಲಾಕ್ ಕಾಂಗ್ರೆಸ್ ಹಾಗೂ ಡಾ. ಶರಣಪ್ರಕಾಶ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಕಲಬುರಗಿ ಕ್ರಾಸ್ ಮತ್ತು ರೈಲು ನಿಲ್ದಾಣದ ಬಳಿಯ ಹನುಮಾನ ದೇವಾಲಯದ ಎದುರು ಉಚಿತ ಊಟದ ಫುಡ್ ಶೆಲ್ಟರ್ಗಳನ್ನು ಸ್ಥಾಪಿಸಲಾಗಿದೆ.
ಉಚಿತ ಫುಡ್ ಶೆಲ್ಟರ್ಗಳಿಗೆ ಚಾಲನೆ ನೀಡಿದ ಮಾಜಿ ಸಚಿವ ಶರಣಪ್ರಕಾಶ ಪಾಟೀಲ - ಕೆಪಿಸಿಸಿ ವಕ್ತಾರರು ಹಾಗೂ ಮಾಜಿ ಸಚಿವ ಡಾ ಶರಣಪ್ರಕಾಶ ಪಾಟೀಲ
ಬಡ ಜನರು ಯಾವ ಮಾನಸಿಕ ಅಡೆತಡೆಗಳಿಗೆ ಒಳಗಾಗದೆ ನೇರವಾಗಿ ಬಂದು ಹಸಿವು ನೀಗಿಸಿಕೊಳ್ಳಲು ಫುಡ್ ಶೆಲ್ಟರ್ ಸಹಕಾರಿಯಾಗಲಿದೆ. ಇಂತಹ ಯೋಜನೆ ರೂಪಿಸಿರುವುದು ಸ್ತುತ್ಯಾರ್ಹ..
ಉಚಿತ ಫುಡ್ ಶೆಲ್ಟರ್
ಬಡವರಿಗೆ ಊಟ ಬಡಿಸುವ ಮೂಲಕ ಕೆಪಿಸಿಸಿ ವಕ್ತಾರರು ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಉಚಿತ ಆಹಾರ ಶೆಲ್ಟರ್ಗಳಿಗೆ ಚಾಲನೆ ನೀಡಿದರು.
ಈ ವೇಳೆ ಹಾಲಪ್ಪಯ್ಯ ವಿರಕ್ತ ಮಠದ ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಬಡ ಜನರು ಯಾವ ಮಾನಸಿಕ ಅಡೆತಡೆಗಳಿಗೆ ಒಳಗಾಗದೆ ನೇರವಾಗಿ ಬಂದು ಹಸಿವು ನೀಗಿಸಿಕೊಳ್ಳಲು ಫುಡ್ ಶೆಲ್ಟರ್ ಸಹಕಾರಿಯಾಗಲಿದೆ. ಇಂತಹ ಯೋಜನೆ ರೂಪಿಸಿರುವುದು ಸ್ತುತ್ಯಾರ್ಹ ಎಂದರು.