ಸೇಡಂ: ನಗರದ ಮೊದಲ ಕೊರೊನಾ ಸೋಂಕಿತ (ಬಾಲಕ) ಗುಣಮುಖನಾಗಿದ್ದು, ಜನ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಸೇಡಂನ ಮೊದಲ ಕೊರೊನಾ ಸೋಂಕಿತ ಬಾಲಕ ಗುಣಮುಖ: ನಿಟ್ಟುಸಿರು ಬಿಟ್ಟ ಜನತೆ - Kalaburagi sedam latest news
ಸತತ ಎರಡೂವರೆ ತಿಂಗಳುಗಳ ಕಾಲ ಗ್ರೀನ್ ಝೋನ್ನಲ್ಲಿದ್ದ ಸೇಡಂನಲ್ಲಿ ಕೆಲ ದಿನಗಳ ಹಿಂದೆ 7 ವರ್ಷದ ಬಾಲಕ (ಮಹಾರಾಷ್ಟ್ರದ ಸೊಲ್ಲಾಪುರದಿಂದ ಹಿಂದಿರುಗಿದ್ದ)ನಲ್ಲಿ ಸೋಂಕು ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಇದೀಗ ಬಾಲಕ ಗುಣಮುಖನಾಗಿ ಮನೆಗೆ ಹಿಂದಿರುಗಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ.
Sedam corona case
ಕಲಬುರಗಿ ಜಿಲ್ಲೆಯಲ್ಲಿ ಮೊದಲ ಕೊರೊನಾ ಸೋಂಕಿತ (ವೃದ್ಧ) ಸಾವನ್ನಪ್ಪಿದಾಗಿನಿಂದಲೂ ಸತತ ಎರಡೂವರೆ ತಿಂಗಳುಗಳ ಕಾಲ ಸೇಡಂ ಗ್ರೀನ್ ಝೋನ್ನಲ್ಲಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಆದ್ರೆ ಮಹಾರಾಷ್ಟ್ರದ ಸೊಲ್ಲಾಪುರದಿಂದ ಹಿಂದಿರುಗಿದ್ದ ರೆಹಮತನಗರ ಬಡಾವಣೆಯ ಬಾಲಕನಲ್ಲಿ ಸೋಂಕು ಪತ್ತೆಯಾಗಿತ್ತು. 7 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಇದೀಗ ಬಾಲಕ ಗುಣಮುಖನಾಗಿ ಮನೆಗೆ ಹಿಂದಿರುಗಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ.