ಕರ್ನಾಟಕ

karnataka

ETV Bharat / state

ಸೇಡಂನಲ್ಲಿ ಬಡ ಕುಟುಂಬಗಳಿಗೆ ದಾನಿಗಳಿಂದ ಪಡೆದ ದಿನಸಿ ಕಿಟ್​ ವಿತರಣೆ - Sedam news

ಮಳಖೇಡದ ರಾಜಶ್ರೀ ಸಿಮೆಂಟ್ ಕಾರ್ಖಾನೆಯವರು ಸಾವಿರಾರು ಆಹಾರ ಧಾನ್ಯ ಕಿಟ್​ಗಳನ್ನು ನೀಡಿದ್ದಾರೆ. ಜೊತೆಗೆ ಶ್ರೀ ಸಿಮೆಂಟ್ ಮತ್ತು ವಾಸವದತ್ತಾ ಸಿಮೆಂಟ್ ಆಡಳಿತ ಮಂಡಳಿಯವರೂ ಸಹ ಜನರ ನೆರವಿಗೆ ಬರಬೇಕೆಂದು ತಹಶೀಲ್ದಾರ್​ ಒತ್ತಾಯಿಸಿದ್ದಾರೆ.

Sedam
ಸೇಡಂ: ಅವಶ್ಯ ಕುಟುಂಬ ಆಹಾರ ಧಾನ್ಯಗಳ ಕಿಟ್​ ವಿತರಣೆ

By

Published : Apr 26, 2020, 7:54 PM IST

ಸೇಡಂ: ದಾನಿಗಳಿಂದ ಸ್ವೀಕರಿಸಿದ ದವಸ ಧಾನ್ಯಗಳ ಪೈಕಿ ಈವರೆಗೂ 3600 ಕಿಟ್​ಗಳನ್ನು ಅವಶ್ಯಕತೆ ಇದ್ದ ಕುಟುಂಬಗಳಿಗೆ ತಲುಪಿಸಲಾಗಿದೆ ಎಂದು ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ ಮಾಹಿತಿ ನೀಡಿದರು.

ಸೇಡಂ: ಆಹಾರ ಧಾನ್ಯಗಳ ಕಿಟ್​ ವಿತರಣೆ

ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಕರೆದ ಎನ್​ಜಿಒ, ದಾನಿಗಳ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಯಾವುದೇ ಪಕ್ಷ ಭೇದ, ಜಾತಿ ಭೇದ ಮಾಡದೇ ಕಷ್ಟದಲ್ಲಿರುವವರಿಗೆ ಕಿಟ್​ಗಳನ್ನು ಸರಬರಾಜು ಮಾಡಲಾಗಿದೆ. ಪಡಿತರ ಕಾರ್ಡ್ ಹೊಂದಿರದವರು ಹಾಗೂ ಪಡಿತರಕ್ಕಾಗಿ ಅರ್ಜಿ ಹಾಕದ 1800 ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರಿಗೂ ಸಹ ದವಸ ಧಾನ್ಯ ತಲುಪಿಸಲಾಗುತ್ತಿದೆ.

ಈಗ ಸರ್ಕಾರದ ಆದೇಶದಂತೆ ವಿವಿಧ ರೀತಿಯಲ್ಲಿ ಜನರಿಗೆ ನೆರವಾದ ಎನ್​ಜಿಒಗಳು, ವೈಯಕ್ತಿಕ ದಾನಿಗಳ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮುಂದೆ ದಾನಿಗಳಿಗೆ ಅನುಕೂಲವಾಗಲಿದೆ. ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಮಾಸ್ಕ್ ಮತ್ತು ಸ್ಯಾನಿಟೈಸರ್ ಅವಶ್ಯಕತೆ ಇದೆ. ಈ ಬಗ್ಗೆ ದಾನ ಮಾಡುವವರು ಮಾಡಬಹುದಾಗಿದ್ದು, ಮಳಖೇಡದ ರಾಜಶ್ರೀ ಸಿಮೆಂಟ್ ಕಾರ್ಖಾನೆಯವರು ಸಾವಿರಾರು ಕಿಟ್​ಗಳನ್ನು ನೀಡಿದ್ದಾರೆ. ಜೊತೆಗೆ ಶ್ರೀ ಸಿಮೆಂಟ್ ಮತ್ತು ವಾಸವದತ್ತಾ ಸಿಮೆಂಟ್ ಆಡಳಿತ ಮಂಡಳಿಯವರೂ ಸಹ ಜನರ ನೆರವಿಗೆ ಬರಬೇಕು ಎಂದರು.

For All Latest Updates

TAGGED:

Sedam news

ABOUT THE AUTHOR

...view details