ಸೇಡಂ(ಕಲಬುರಗಿ):ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಂಚೋಳಿ ರಸ್ತೆಯ ರುದ್ನೂರ ಗೇಟ್ ಬಳಿ ನಡೆದಿದೆ.
ನಾಲ್ಕು ದಿನಗಳ ಹಿಂದಷ್ಟೇ ತಂದೆಯಾಗಿದ್ದ ವ್ಯಕ್ತಿ... ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ! - ಸೇಡಂ ಚಿಂಚೋಳಿ ರುದ್ನೂರು ಗೇಟ್ ವ್ಯಕ್ತಿ ಸಾವು ಸುದ್ದಿ
ಸೇಡಂ ತಾಲೂಕಿನ ರುದ್ನೂರ ಗೇಟ್ ನ ಮಹಾದ್ವಾರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆಯ ನಂತರವಷ್ಟೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಸತ್ಯ ಹೊರ ಬೀಳಲಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಯಿತ ಸಾವು
ಮೃತ ವ್ಯಕ್ತಿಯನ್ನು ಕಾಳಗಿ ತಾಲೂಕಿನ ಕೊಡದೂರ ನಿವಾಸಿ ಹಾವಪ್ಪ ಕುಕ್ಕುಂದಿ (32) ಎಂದು ಗುರುತಿಸಲಾಗಿದೆ. ಈತ ರುದ್ನೂರ ಗೇಟ್ ನ ಮಹಾದ್ವಾರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಬೇಕಿದೆ.
ಚಿಂಚೋಳಿ ರಸ್ತೆಯ ರುದ್ನೂರ ಗೇಟ್ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತ ಸಾವು
ವರ್ಷದ ಹಿಂದಷ್ಟೆ ಮದುವೆಯಾಗಿದ್ದ ಹಾವಪ್ಪ, ನಾಲ್ಕು ದಿನಗಳ ಹಿಂದಷ್ಟೆ ಈತನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಸ್ಥಳಕ್ಕೆ ಪಿಎಸ್ಐ ಸುಶೀಲಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.