ಕರ್ನಾಟಕ

karnataka

ETV Bharat / state

ತಂದೆಯೇ ಮಗನನ್ನು ಕೊಂದ ಘಟನೆಗೆ ಸಾಕ್ಷಿಯಾದ 'ಮಣ್ಣಿಂದ ಎದ್ದು ಬಂದ ಕಾಲು'.. ರೋಚಕ ಘಟನೆ..! - ಬೀರನಹಳ್ಳಿ ಅನಾಥ ಶವ ಪತ್ತೆ ಘಟನೆ

ಅನಾಥ ಶವ ಪತ್ತೆ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಮತ್ತೊಂದು ಪ್ರಕರಣ ಎದುರಾಗಿ ತಂದಯೇ ಮಗನನ್ನು ಬರ್ಬರವಾಗಿ ಕೊಂದು ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರಿಗೆ ಅನಾಥ ಶವ ಯಾರದ್ದು ಎಂಬ ಪ್ರಶ್ನೆ ಎದುರಾಗಿದೆ.

sedam-beeranahalli-murder-mystery
ಮಣ್ಣಿಂದ ಎದ್ದು ಬಂದ ಕಾಲು

By

Published : Aug 27, 2021, 9:15 PM IST

ಸೇಡಂ: ಹತ್ಯೆ ಪ್ರಕರಣವೊಂದರ ಬೆನ್ನು ಹತ್ತಿದ್ದ ಪೊಲೀಸರಿಗೆ ಮತ್ತೊಂದು ಪ್ರಕರಣ ಪತ್ತೆಯಾಗುವ ಮೂಲಕ ರೋಚಕ ಟ್ವಿಸ್ಟ್​​ಗೆ ಕಾರಣವಾದ ಘಟನೆಯೊಂದು ತಾಲೂಕಿನ ಬೀರನಹಳ್ಳಿ ಸಮೀಪದಲ್ಲಿ ಜರುಗಿದೆ.

ಬೀರನಹಳ್ಳಿ ಸಮೀಪದ ರಸ್ತೆಯ ಪಕ್ಕದ ಜಮೀನಿನಲ್ಲಿ ಮಣ್ಣಿಂದ ಮೇಲೆದ್ದ ಹೆಣದ ಕಾಲು ಕಂಡ ಬಂದ ಬಗ್ಗೆ ಮಾಹಿತಿ ದೊರಕಿತ್ತು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಗ್ರಾಮದ ನಿವಾಸಿ ಅಂಬರೀಶ ಭೀಮರಾವ್​ ಅಡಕಿ (18) ಎಂಬ ಯುವಕನೊಬ್ಬ ಕೆಲ ದಿನಗಳ ಹಿಂದೆ ಕಣ್ಮರೆಯಾದ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಲ್ಲದೇ ಆತನ ಕುಟುಂಬಸ್ಥರ ನಡುವಳಿಕೆ ಪೊಲೀಸರಿಗೆ ಅನುಮಾನ ಮೂಡಿಸಿತ್ತು.

ತಂದೆಯೇ ಮಗನನ್ನು ಕೊಂದ ಘಟನೆಗೆ ಸಾಕ್ಷಿಯಾದ 'ಮಣ್ಣಿಂದ ಎದ್ದು ಬಂದ ಕಾಲು'

ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಮಗ ಕುಡಿದು ತಂದೆಯನ್ನು ಹೊಡೆಯಲು ಬಂದಾಗ, ತಂದೆಯಿಂದಲೇ ಕೊಲೆಯಾಗಿದ್ದಾಗಿ ವರದಿಯಾಗಿದೆ. ಅಲ್ಲದೇ, ಜಮೀನಿನಲ್ಲಿ ಹೆಣವನ್ನು ಹೂತಿಟ್ಟಿದ್ದಾಗಿ ತಿಳಿದು ಬಂದಿದೆ. ಈ ಕುರಿತು ತಂದೆ ಭೀಮರಾವನ್ನು ವಿಚಾರಿಸಿದ ಮಳಖೇಡ ಪೊಲೀಸರಿಗೆ ದೊಡ್ಡ ಟ್ವಿಸ್ಟ್ ಎದುರಾಗಿದೆ.

ನಂತರ ಹೂತಿಟ್ಟ ಶವದ ಸ್ಥಳದ ಬಳಿ ಪೊಲೀಸರು ಆರೋಪಿಯನ್ನು ಕರೆದುಕೊಂಡು ಹೋಗಿದ್ದಾರೆ, 'ಇಲ್ಯಾಕೆ ಕರೆದುಕೊಂಡು ಬಂದ್ರಿ, ಈ ಹೆಣ ನನ್ನ ಮಗನದಲ್ಲ, ನಾನು ನನ್ನ ಸ್ವಂತ ಜಮೀನಿನಲ್ಲಿ ಹೂತು ಹಾಕಿದ್ದೇನೆ' ಎಂದು ಬೀರನಳ್ಳಿ ಗೇಟ್​ ಬಳಿಯ ತನ್ನ ಜಮೀನಿಗೆ ಬೀಮರಾವ್​​ ಕರೆದೊಯ್ದಿದ್ದಾನೆ.

ಇದರಿಂದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಬೀರನಹಳ್ಳಿ ರಸ್ತೆಯಲ್ಲಿ ಮಣ್ಣಿಂದ ಮೇಲೆದ್ದ ಹೆಣ ಹಾಗೂ ಮಗನನ್ನು ಕೊಂದು ಜಮೀನಿನಲ್ಲಿ ಹೂತಿಟ್ಟ ಹೆಣದ ಕುರಿತು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಮುಧೋಳ ಪಿಐ ಆನಂದರಾವ್​, ಮಳಖೇಡ ಪಿಎಸ್ಐ ಪೃಥ್ವಿರಾಜ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details