ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಬಂದ ಭಾರಿ ಸದ್ದು ಜನರಲ್ಲಿ ಆತಂಕ ಉಂಟು ಮಾಡಿದೆ.
ವರ್ಷದಲ್ಲಿ ಮತ್ತೊಮ್ಮೆ ಭೂಕಂಪದ ಅನುಭವ.. ಭಯ ಭೀತರಾದ ಗಡಿಕೇಶ್ವರ ಗ್ರಾಮಸ್ಥರು - ಕಲಬುರಗಿ ಭೂಕಂಪ
ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಬಂದ ಭಾರಿ ಸದ್ದು ಜನರಲ್ಲಿ ಆತಂಕ ಉಂಟು ಮಾಡಿದೆ.
ಮಧ್ಯಾಹ್ನ 1.27 ರ ಸುಮಾರಿಗೆ ಧನ್ ಧನ್ ಎನ್ನುವ ಭಾರಿ ಸದ್ದು ಕೇಳಿ ಬಂದಿದ್ದು ಒಂದು ಕ್ಷಣ ಭೂಮಿ ಕಂಪಿಸಿ ಗ್ರಾಮಸ್ಥರಿಗೆ ಭೂಕಂಪದ ಅನುಭವವಾಗಿದೆ. ಸದ್ದು ಕೇಳಿತ್ತಿದಂತೆ ಭಯಭೀತಿರಾದ ಜನ ಮನೆಯೊಳಗಿಂದ ಹೊರಬಂದಿದ್ದಾರೆ. ಕಳೆದ ವರ್ಷ ಕೂಡ ಚಳಿಗಾಲದಲ್ಲಿ ಇದೆ ರೀತಿ ಭೂಮಿಯಿಂದ ವಿಚಿತ್ರ ಸದ್ದುಕೇಳಿ ಬಂದಿತ್ತು ಮತ್ತೆ ಭೂಮಿಯಿಂದ ಸದ್ದು ಬಂದಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಗಡಿಕೇಶ್ವರ ಗ್ರಾಮದಲ್ಲಿ ವರ್ಷಕ್ಕೆ ಎರಡನೇ ಬಾರಿ ಈ ರೀತಿಯ ಭಯಾನಕ ಸದ್ದು ಕೇಳಿಬರುತ್ತಿದೆ ಇದರಿಂದ ಮನೆಗಳು ಬಿರುಕು ಬಿಟ್ಟು ಅಪಾರ ಹಾನಿ ಉಂಟಾಗುತ್ತಿದೆ ಆದ್ರೂ ಸರ್ಕಾರ ಯಾವುದೆ ಕ್ರಮ ಕೈಗೊಂಡಿಲ್ಲ, ಪರಿಹಾರ ಕೂಡ ಕೊಟ್ಟಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಕೊಡಲೇ ಸರ್ಕಾರ ತನಿಖೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಂತೆ ಆಗ್ರಹಿಸಿದ್ದಾರೆ.