ಕಲಬುರಗಿ: ಭೂಕಂಪನದಿಂದ ತಲ್ಲಣಗೊಂಡಿರುವ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮಕ್ಕೆ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿ ಸಂಶೋಧನೆ ನಡೆಸುತ್ತಿದ್ದಾರೆ.
ಭೂ ಕಂಪನದಿಂದ ತಲ್ಲಣಗೊಂಡ ಗಡಿಕೇಶ್ವರ ಗ್ರಾಮಕ್ಕೆ ವಿಜ್ಞಾನಿಗಳ ತಂಡ ಭೇಟಿ ವಿಜ್ಞಾನಿಗಳಿಗೆ ರಾಜ್ಯ ಮೈನ್ಸ್ ಇಲಾಖೆ ಅಧಿಕಾರಿಗಳ ತಂಡ ಸಾಥ್ ನೀಡಿದೆ. ಜಂಟಿಯಾಗಿ ಭೂ ಕಂಪನದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಸೋಮವಾರ ರಾತ್ರಿ 9-55 ಕ್ಕೆ 4.1 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಭೂಮಿಯ 5 ಕೀ.ಮೀಟರ್ ಆಳದಲ್ಲಿ ಕಂಪನವಾಗಿದೆ ಎಂದು ಅಂದಾಜಿಸಲಾಗಿತ್ತು.
ಇದೀಗ ವಿಜ್ಞಾನಿಗಳ ಪ್ರಾಥಮಿಕ ತನಿಖಾ ಮಾಹಿತಿಯಲ್ಲಿ ಅಂದಾಜು 7 ಕೀ. ಮೀಟರ್ ಆಳದವರೆಗೆ ಭೂ ಕಂಪನದ ಎಫೆಕ್ಟ್ ತಟ್ಟಿರುವ ಸಾಧ್ಯತೆ ಕಂಡು ಬರುತ್ತಿದೆ. ಭೂಕಂಪದಿಂದ ಆಗಿರುವ ಎಫೆಕ್ಟ್ ಹಾಗೂ ಕಂಪಿಸಲು ಕಾರಣ ಏನು ಅನ್ನೋದು ಸೇರಿದಂತೆ ಹೆಚ್ಚಿನ ಮಾಹಿತಿಯನ್ನ ತಂಡ ಕಲೆ ಹಾಕುತ್ತಿದೆ.
ಈಗಾಗಲೇ ಹೆದರಿದ ಗ್ರಾಮದ ಜನರು ಬೇರೆಡೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಇಂದು ಜಿಲ್ಲಾಡಳಿತ ಗಡಿಕೇಶ್ವರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕಾಳಜಿ ಕೇಂದ್ರ ಹಾಗೂ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿದೆ. ಗಡಿಕೇಶ್ವರ ಗ್ರಾಮದಲ್ಲಿಯೇ ಬೀಡು ಬಿಟ್ಟಿರುವ ಚಿಂಚೋಳಿ ತಹಶೀಲ್ದಾರ್ ಅಂಜುಮ್ ತಬಸುಮ್ ಮತ್ತು ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಓದಿ:ಹೊಸ ಶಿಕ್ಷಣ ನೀತಿ ಭಾರತವನ್ನು ಜಾಗತಿಕವಾಗಿ ಬೆಳೆಸಲಿದೆ : ಸಚಿವ ಅಶ್ವತ್ಥ್ ನಾರಾಯಣ