ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಶಾಲೆಗಳು ಪುನಾರಂಭ : ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸಕಲ ಸಿದ್ಧತೆ - kalaburagi education department

ಶಾಲೆಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸೇಷನ್​ ಮಾಡಲಾಗಿದೆ. ಶಾಲೆಗಳ ಮುಂಭಾಗ ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳು ಶಾಲಾ ಕೊಠಡಿ ಪ್ರವೇಶ ಮಾಡಲು ಮೂರು ಅಡಿ ಅಂತರದಲ್ಲಿ ಸೇಫ್ಟಿ ಮಾರ್ಕ್​ಗಳನ್ನು ಹಾಕಲಾಗಿದೆ..

school room sanitize
ಶಾಲಾ ಕೊಠಡಿ ಸ್ಯಾನಿಟೈಸ್​

By

Published : Aug 22, 2021, 5:47 PM IST

ಕಲಬುರಗಿ :ಕೋವಿಡ್ ಸೋಂಕಿನ ಕಾರಣಕ್ಕೆ ಬಂದ್ ಮಾಡಲಾಗಿದ್ದ ಶಾಲೆಗಳನ್ನು ನಾಳೆಯಿಂದ ಪುನಾರಂಭಿಸಲಾಗುತ್ತಿದೆ. ಹೀಗಾಗಿ, ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ನಾಳೆಯಿಂದ 9, 10, 11 ಮತ್ತು 12ನೇ ತರಗತಿಗಳು ಪುನಾರಂಭವಾಗುತ್ತಿವೆ. ಕಲಬುರಗಿಯಲ್ಲಿ 779 ಪ್ರೌಢ ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲಾಗಿದೆ.

ಶಾಲೆಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸೇಷನ್​ ಮಾಡಲಾಗಿದೆ. ಶಾಲೆಗಳ ಮುಂಭಾಗ ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳು ಶಾಲಾ ಕೊಠಡಿ ಪ್ರವೇಶ ಮಾಡಲು ಮೂರು ಅಡಿ ಅಂತರದಲ್ಲಿ ಸೇಫ್ಟಿ ಮಾರ್ಕ್​ಗಳನ್ನು ಹಾಕಲಾಗಿದೆ.

ಡಿಡಿಪಿಐ ಅಶೋಕ್​ ಬಜಂತ್ರಿ ಮಾತನಾಡಿರುವುದು..

ಇಲಾಖೆ ಸಿಬ್ಬಂದಿ ಶಾಲಾ ಆವರಣದಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸೇಷನ್ ಮಾಡಿ ಮಕ್ಕಳಿಗೆ ತರಗತಿಗಳಿಗೆ ಪ್ರವೇಶ ನೀಡಲಿದ್ದಾರೆ. ಪ್ರತಿ ತರಗತಿಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಬೆಂಚ್​ಗೆ ಓರ್ವ ವಿದ್ಯಾರ್ಥಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ನಾಳೆ ಶಾಲೆ ಆರಂಭಿಸಲು ಕಲಬುರಗಿ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿದೆ.

ಓದಿ:ಮಂಗಳೂರಿನಲ್ಲಿ ಮೊಗವೀರರಿಂದ ಸಮುದ್ರಪೂಜೆ ; ಹೇರಳ ಮತ್ಸ್ಯ ಸಂಪತ್ತಿಗಾಗಿ ಪ್ರಾರ್ಥನೆ

ABOUT THE AUTHOR

...view details