ಕಲಬುರಗಿ: ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಸೂರ್ಯಕಾಂತ ಕದಂ ಎಸ್ಸಿ, ಎಸ್ಟಿ ನೌಕರರನ್ನು ಯಾವ ಜಿಲ್ಲೆಯಲ್ಲಿಯೂ ಅಧ್ಯಕ್ಷರಾಗದಂತೆ ನೋಡಿಕೊಳ್ಳಿ ಎಂದು ಕರೆ ನೀಡಿ ವಿವಾದಕ್ಕೀಡಾಗಿದ್ದಾರೆ. ಕದಂ ಜಾತಿ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘ ಆರೋಪಿಸಿದ್ದು, ಫುಲ್ ಗರಂ ಆಗಿದೆ.
ಜಾತಿ ವಿಷಬೀಜದ ಆರೋಪ... ಮಾಜಿ ಜಿಲ್ಲಾಧ್ಯಕ್ಷನ ವಿರುದ್ದ ನೌಕರರ ಸಂಘ ಗರಂ
ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ನೌಕರರನ್ನು ಯಾವುದೇ ನೌಕರರ ಸಂಘದಲ್ಲಿ ಅಧ್ಯಕ್ಷರನ್ನಾಗಿ ಮಾಡಬೇಡಿ ಎಂದು ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷರೊಬ್ಬರ ಹೇಳಿಕೆಯನ್ನು ಖಂಡಿಸಿ ಪರಿಶಿಷ್ಟ ಜಾತಿ, ಪಂಗಡ ಸಂಘ ಗರಂ ಆಗಿದೆ.
ಜಿಲ್ಲಾಧ್ಯಕ್ಷನ ವಿರುದ್ದ
ಕಲಬುರ್ಗಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸೋಮಶೇಖರ ಮದನಕರ್, ಸೂರ್ಯಕಾಂತ ಕದಂ ಅವರು ಅಹಿಂಸಾ ವೇದಿಕೆ ಕಟ್ಟಿಕೊಂಡು ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ. ನೌಕರರ ಸಂಘದಲ್ಲಿ ಎಸ್.ಸಿ., ಎಸ್.ಟಿ. ನೌಕರರನ್ನು ಅಧ್ಯಕ್ಷರನ್ನಾಗಿ ಆಯ್ಕೆಯಾಗದಂತೆ ನೋಡಿಕೊಳ್ಳಿ ಎಂದು ಪರಿಶಿಷ್ಟರ ವಿರೋಧಿ ನೀತಿ ಅನುಸರಿಸಿ, ಜಾತಿ ನಿಂದನೆ ಮಾಡಿದ್ದಾರೆ. ಅಹಿಂಸಾ ವೇದಿಕೆ ಹೆಸರಲ್ಲಿ ಜಾತಿ ನಿಂದನೆ ಮಾಡಿದ ಕದಂ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮದನಕರ್ ಆಗ್ರಹಿಸಿದ್ದಾರೆ.
TAGGED:
Kalburgi