ಕಲಬುರಗಿ: ಸಿಎಎ,ಎನ್ಸಿಆರ್ ಹಾಗೂ ಎನ್ಪಿಆರ್ ವಿರೋಧಿಸಿ ಮಹಿಳೆಯರಿಂದ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಸಿಎಎ,ಎನ್ಸಿಆರ್,ಎನ್ಪಿಆರ್ ವಿರೋಧ.. ಮಳೆಯರಿಂದ ಒಂದು ದಿನದ ಧರಣಿ ಸತ್ಯಾಗ್ರಹ..
ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಸ್ ಫಾತಿಮಾ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸಿಎಎ,ಎನ್ಸಿಆರ್ ಹಾಗೂ ಎನ್ಪಿಆರ್ಯನ್ನು ವಿರೋಧಿಸಿ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಸ್ ಫಾತೀಮಾ ನೇತೃತ್ವದಲ್ಲಿ ನಗರದ ಜಗತ್ ವೃತ್ತದ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಧರಣಿ ಆಯೋಜಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಸಿಎಎ, ಎನ್ಸಿಆರ್ ಹಾಗೂ ಎನ್ಪಿಆರ್ ಜಾರಿಗೆ ತರದಂತೆ ಒತ್ತಾಯಿಸಿದರು.
ಮಸೂದೆ ವಿರೋಧಿಸಿ 24 ತಾಸುಗಳ ಕಾಲ ನಡೆಯಲಿರೋ ಧರಣಿ ಸತ್ಯಾಗ್ರಹದಲ್ಲಿ ನೂರಾರು ಮಹಿಳೆಯರು ಭಾಗಿಯಾಗಿದ್ದರು. ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್, ದಲಿತ ಮುಖಂಡ ವಿಠಲ್ ದೊಡ್ಮನಿ, ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಮತ್ತಿತರರು ಧರಣಿಗೆ ಬೆಂಬಲಿಸಿದರು.