ಕಲಬುರಗಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರ ಓಲೈಕೆಗೆ ಆಕಾಂಕ್ಷಿ ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತು ಪ್ರಾರಂಭಿಸಿದ್ದಾರೆ. ಆಳಂದ ಪಟ್ಟಣದಲ್ಲಿ ನಡೆದ ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಮಹೇಶ್ವರಿ ವಾಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಹೆಸರಿನಲ್ಲಿ ಸೀರೆ ಹಂಚಿದ್ದಾರೆ.
ಮತದಾರ ಓಲೈಕೆಗೆ ಅಭ್ಯರ್ಥಿಗಳ ಕಸರತ್ತು: ಆಳಂದ ಪಟ್ಟಣದಲ್ಲಿ ಮಹಿಳೆಯರಿಗೆ ಸೀರೆ ಗಿಫ್ಟ್ - ಆಳಂದ ಪಟ್ಟಣದಲ್ಲಿ ಜೆಡಿಎಸ್ ಮಹಿಳಾ ಸಮಾವೇಶ
ಆಳಂದ ಪಟ್ಟಣದಲ್ಲಿ ಜೆಡಿಎಸ್ ಮಹಿಳಾ ಸಮಾವೇಶ. ಉಡಿ ತುಂಬುವ ಕಾರ್ಯಕ್ರಮದ ಹೆಸರಿನಲ್ಲಿ ನೂರಾರು ಮಹಿಳೆಯರಿಗೆ ಸೀರೆ ವಿತರಿಸಿದ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಮಹೇಶ್ವರಿ ವಾಲಿ.
ಮಹಿಳೆಯರಿಗೆ ಸೀರೆ ವಿತರಿಸಿದ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ
ಮಾಜಿ ಪ್ರಧಾನಿ ದೇವೇಗೌಡ, ಶಾಸಕಿ ಅನಿತಾ ಕುಮಾರಸ್ವಾಮಿ ಭಾಗಿಯಾದ ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರಿಗೆ ಸೀರೆ ವಿತರಣೆ ಮಾಡಿದ್ದಾರೆ. ಈಗಾಗಲೇ ಮನೆ ಬಾಗಿಲಿಗೆ ತೆರಳಿ ಮತ ಬೇಟೆಗಿಳಿದ ಮಹೇಶ್ವರಿ ವಾಲಿ, ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದು ಗೆಲವು ಸಾಧಿಸಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಮಹಿಳಾ ಮತಗಳನ್ನು ಓಲೈಕೆಗೆ ಸೀರೆ ಹಂಚುವ ತಂತ್ರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:ಸರ್ವ ಧರ್ಮಗಳ ಸಾಮೂಹಿಕ ವಿವಾಹ: ಕಾಂಗ್ರೆಸ್ ಮುಖಂಡನಿಂದ ನವ ಜೋಡಿಗಳಿಗೆ ಭರ್ಜರಿ ಉಡುಗೊರೆ