ಕರ್ನಾಟಕ

karnataka

ETV Bharat / state

ಮಠಾಧೀಶರಿಗೆ-ಸ್ವಾಮೀಜಿಗಳಿಗೆ ಸಮಾಜ ಸೇವೆ ಕಲಿಸಿಕೊಟ್ಟಿದ್ದು ಮಾರುತಿ ಮಾನ್ಪಡೆ: ಸಾರಂಗಧರ ದೇಶಿ ಕೇಂದ್ರ ಮಹಾಸ್ವಾಮಿ

ಮಾರುತಿ‌‌ ಮಾನ್ಪಡೆ ಅವರು ಹಿಂದೂಳಿದ, ದಲಿತರ, ಶೋಷಿತರ, ರೈತ-ಕಾರ್ಮಿಕರ ಒಂದು ದೊಡ್ಡ ಶಕ್ತಿಯಾಗಿದ್ದರು, ಅವರ ಅಗಲಿಕೆ ರಾಜ್ಯದ ಅತಿ‌ ದೊಡ್ಡ ಧ್ವನಿ ಅಡಗಿದಂತಾಗಿದೆ ಎಂದು ಸುಲಫಲ್ ಮಠದ ಸಾರಂಗಧರ ದೇಶಿ ಕೇಂದ್ರ ಮಹಾಸ್ವಾಮಿಗಳು ತಿಳಿಸಿದರು.

sarangadhara-desi-kendra-mahaswamy-talk-about-maruti-manpade
ಸಾರಂಗಧರ ದೇಶಿ ಕೇಂದ್ರ ಮಹಾಸ್ವಾಮಿ

By

Published : Nov 8, 2020, 4:23 PM IST

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಠಾಧೀಶರಿಗೆ ಸ್ವಾಮೀಜಿಗಳಿಗೆ ಸಮಾಜ ಸೇವೆಯನ್ನು ಕಲಿಸಿಕೊಟ್ಟಿದ್ದು ಹೋರಾಟಗಾರ ಮಾರುತಿ ಮಾನ್ಪಡೆ ಎಂದು ಸುಲಫಲ್ ಮಠದ ಸಾರಂಗಧರ ದೇಶಿ ಕೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಸಾರಂಗಧರ ದೇಶಿ ಕೇಂದ್ರ ಮಹಾಸ್ವಾಮಿ

ಭಾರತ್ ಕಮ್ಯುನಿಸ್ಟ್​ ಪಕ್ಷದ (ಮಾರ್ಕ್ಸ್​​ವಾದ) ವತಿಯಿಂದ ನಗರದ ಎಸ್ಎಂ ಪಂಡಿತ್ ರಂಗ ಮಂದಿರದಲ್ಲಿ ಆಯೋಜಿದ್ದ ದಿ.ಮಾರುತಿ ಮಾನ್ಪಡೆ ಅವರಿಗೆ ಶ್ರದ್ಧಾಂಜಲಿ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಾರುತಿ‌‌ ಮಾನ್ಪಡೆ ಅವರು ಹಿಂದುಳಿದ, ದಲಿತರ, ಶೋಷಿತರ, ರೈತ-ಕಾರ್ಮಿಕರ ಒಂದು ದೊಡ್ಡ ಶಕ್ತಿಯಾಗಿದ್ದರು, ಅವರ ಅಗಲಿಕೆ ರಾಜ್ಯದ ಅತಿ‌ ದೊಡ್ಡ ಧ್ವನಿ ಅಡಗಿದಂತಾಗಿದೆ ಎಂದರು.

ಮಠಾಧೀಶರು ಎಂದರೆ ಪೀಠದ ಮೇಲೆ ಕುಳಿತುಕೊಳ್ಳುವವರಲ್ಲ. ರಸ್ತೆಗೆ ಇಳಿದು ಜನಸೇವೆ ಮಾಡುವವರೆ ಮಠಾಧೀಶರು ಎನ್ನುತ್ತಿದ್ದರು ಮಾನ್ಪಡೆ. ಅವರು ಹೋರಾಟದ ಮಾಡದೆ ಇರುವ ದಿನಗಳೆ ಇರಲಿಲ್ಲ, ಅವರನ್ನು ಕಳೆದುಕೊಂಡ ಈ ನಾಡು ಬಡವಾಗಿದೆ ಎಂದು ಸಂತಾಪ ಸೂಚಿಸಿದರು. ಸಮಾರಂಭದಲ್ಲಿ ಸಿಪಿಐ ಪಕ್ಷದ ಮುಖಂಡ ಮೇಘರಾಜ್ ಕಟಾರೆ ಅವರು ಮಾರುತಿ‌ ಮಾನ್ಪಡೆ ಅವರ ಕುಟುಂಬಕ್ಕೆ 1 ಲಕ್ಷ ರೂ. ಚೆಕ್ ವಿತರಿಸಿದರು.

ಮಾಜಿ ಸಚಿವ ಶರಣಪ್ರಕಾಶ ಪಾಟೀಲ್, ಮಾಜಿ ಶಾಸಕ ಬಿ.ಆರ್. ಪಾಟೀಲ್ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ABOUT THE AUTHOR

...view details