ಕರ್ನಾಟಕ

karnataka

ETV Bharat / state

ಶರಣಬಸವ ವಿಶ್ವವಿದ್ಯಾಲಯದ ಯುವಜನೋತ್ಸವಕ್ಕೆ ತೆರೆ - Belagavi

ಕಲಬುರಗಿ ಜಿಲ್ಲೆಯ ಶರಣಬಸವ ವಿಶ್ವವಿದ್ಯಾಲಯದಲ್ಲಿ ಯುವಜನೋತ್ಸವ ಸಂಭ್ರಮ ಯಶಸ್ವಿಯಾಗಿ ಪೂರ್ಣಗೊಂಡಿತು.

ಶರಣಬಸವ ವಿಶ್ವವಿದ್ಯಾಲಯದ ಯುವಜನೋತ್ಸವ

By

Published : Feb 25, 2019, 10:59 AM IST

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಯುವಜನೋತ್ಸವ ಸಂಭ್ರಮ ತೆರೆ ಕಂಡಿದೆ.

ಇಲ್ಲಿನ ಶರಣಬಸವ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಿದ್ದ ಯುವಜನೋತ್ಸವ- ಜ್ಞಾನೋತ್ಸವ ಸಮಾರಂಭದ ಅಂಗವಾಗಿ ಮೂರು ದಿನ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡರು.

ಇನ್ನೂ ಮೂರನೇ ದಿನವಾದ ಇಂದು ಫ್ಲವರ್ ಡೆಕೋರೇಶನ್, ಪೈಂಟಿಂಗ್, ರಸಪ್ರಶ್ನೆ, ಫೋಟೊಗ್ರಫಿ ಮತ್ತು ಎಥ್ನಿಕ್ ಸ್ಪರ್ಧೆಗಳು ಜರುಗಿದವು. ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಶರಣಬಸವಪ್ಪ ಅಪ್ಪ ಅವರು ಬಹುಮಾನ ವಿತರಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸಾಂಸ್ಕಂತಿಕ ಕಾರ್ಯಕ್ರಮಗಳು ಹಾಗೂ ರ‍್ಯಾಂಪ್ ವಾಕ್ ಸಹ ಏರ್ಪಡಿಸಲಾಗಿತ್ತು.

For All Latest Updates

TAGGED:

Belagavi

ABOUT THE AUTHOR

...view details