ಕಲಬುರಗಿ:ವಿಮಾನ ನಿಲ್ದಾಣದಲ್ಲಿನ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಸ್ಥಾನ ಧ್ವಂಸಗೊಳಿಸಿ ಜಿಲ್ಲಾಡಳಿತ ಮತ್ತು ವಿಮಾನಯಾನ ಪ್ರಾಧಿಕಾರ ಬಂಜಾರ ಸಮುದಾಯದ ಭಾವನೆಗಳ ಜೊತೆ ಚೆಲ್ಲಾಟವಾಡಿವೆ ಎಂದು ಸರಡಗಿಯ ಶ್ರೀ ರೇವಣಸಿದ್ಧ ಶಿವಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಸೇವಾಲಾಲ್ ದೇವಸ್ಥಾನ ಧ್ವಂಸ: ಸರಡಗಿ ಶ್ರೀಗಳಿಂದ ಖಂಡನೆ
ಕಲಬುರಗಿಯಲ್ಲಿ ಸಂತ ಸೇವಾಲಾಲ್ ಹಾಗೂ ಮರಿಯಮ್ಮ ಮೂರ್ತಿಗಳನ್ನು ಧ್ವಂಸಗೊಳಿಸಿ, ಬಂಜಾರ ಸಮುದಾಯದ ಭಾವನೆಗಳಿಗೆ ಘಾಸಿಗೊಳಿಸಲಾಗಿದೆ ಎಂದು ಸರಡಗಿಯ ಶ್ರೀ ರೇವಣಸಿದ್ಧ ಶಿವಾಚಾರ್ಯ ಶ್ರೀಗಳು ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಸೇವಾಲಾಲ್ ದೇವಸ್ಥಾನ ಧ್ವಂಸ,ಸರಡಗಿ ಶ್ರೀ ಖಂಡನೆ
ನಗರದಲ್ಲಿ ಮಾತನಾಡಿದ ಅವರು, ಮದಿಹಾಳ ತಾಂಡಾ ಸ್ಥಳಾಂತರದ ವೇಳೆ ದೇವಸ್ಥಾನ ಯಥಾ ಸ್ಥಿತಿಯಲ್ಲಿಯೇ ಬಿಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆ ಭರವಸೆಯೊಂದಿಗೆ ತಾಂಡಾ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ, ರಾತ್ರೋರಾತ್ರಿ ದೇವಸ್ಥಾನ ಧ್ವಂಸಗೊಳಿಸಿದ ಕ್ರಮವನ್ನು ಶ್ರೀಗಳು ಖಂಡಿಸಿದ್ದಾರೆ.
ಇನ್ನು ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ದೇವಸ್ಥಾನ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.