ಕರ್ನಾಟಕ

karnataka

ETV Bharat / state

ರಸ್ತೆ ದಾಟುವಾಗ ಬಾಲಕನಿಗೆ ಡಿಕ್ಕಿ ಹೊಡೆದ ಮರಳಿನ ಟಿಪ್ಪರ್ : ಉದ್ರಿಕ್ತರಿಂದ ವಾಹನಕ್ಕೆ ಬೆಂಕಿ - Furious people set fire to tipper

ರಸ್ತೆ ದಾಟುತ್ತಿದ್ದ ಬಾಲಕನ ಮೇಲೆ ಟಿಪ್ಪರ್​ ಹರಿದ ಘಟನೆ ಕಲಬುರಗಿ ನಗರದ ಹೀರಾಪುರ ಬಡಾವಣೆಯ ಫ್ಲೈಓವರ್ ಬಳಿ ನಡೆದಿದೆ. ಬಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದು, ಈ ಸಂಬಂಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Sand tipper that collides with a boy while crossing the road
ರಸ್ತೆ ದಾಟುವಾಗ ಬಾಲಕನಿಗೆ ಡಿಕ್ಕಿ ಹೊಡೆದ ಮರಳಿನ ಟಿಪ್ಪರ್

By

Published : Mar 27, 2022, 7:09 PM IST

Updated : Mar 27, 2022, 7:25 PM IST

ಕಲಬುರಗಿ :ರಸ್ತೆ ದಾಟುತ್ತಿದ್ದ ಬಾಲಕನ ಮೇಲೆ ಮರಳಿನ ಟಿಪ್ಪರ್ ಹರಿದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಈ ಘಟನೆ ನಗರದ ಹೀರಾಪುರ ಬಡಾವಣೆಯ ಫ್ಲೈಓವರ್ ಬಳಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಟಿಪ್ಪರ್‌ಗೆ ಬೆಂಕಿ ಹಚ್ಚಿದ್ದಾರೆ.

ರಸ್ತೆ ದಾಟುವಾಗ ಬಾಲಕನಿಗೆ ಡಿಕ್ಕಿ ಹೊಡೆದ ಮರಳಿನ ಟಿಪ್ಪರ್

ಮನೀಷ್ ಮಲ್ಲಿಕಾರ್ಜುನ (10) ಮೃತ ಬಾಲಕ. ಪೋಷಕರ ಜೊತೆ ರಸ್ತೆ ದಾಟುತ್ತಿದ್ದ ವೇಳೆ ರಭಸವಾಗಿ ಬಂದ ಟಿಪ್ಪರ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಟಿಪ್ಪರ್ ಬಾಲಕನ ಮೇಲೆ ಹರಿದ ಪರಿಣಾಮ ದೇಹ ಛಿದ್ರಗೊಂಡಿದೆ.

ಇದನ್ನೂ ಓದಿ:ಚಿಕ್ಕೋಡಿಯಲ್ಲಿ ಯುವಕನ ಬರ್ಬರ ಕೊಲೆ.. ಕಬ್ಬಿನ ಗದ್ದೆಯಲ್ಲಿ ಶವ ಎಸೆದು ದುಷ್ಕರ್ಮಿಗಳು ಪರಾರಿ

ಈ ವೇಳೆ ಉದ್ರಿಕ್ತರು ಟಿಪ್ಪರ್​​​​ಗೆ ಬೆಂಕಿ ಹಚ್ಚಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ‌. ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Mar 27, 2022, 7:25 PM IST

For All Latest Updates

ABOUT THE AUTHOR

...view details