ಕಲಬುರಗಿ:ಜಿಲ್ಲೆಯಾದ್ಯಂತ ಮರಳು ಮಾಫಿಯಾಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಮರಳು ಮಾಫಿಯಾ ಮೇಲೆ ಜಿಲ್ಲಾಡಳಿತದ ಹದ್ದಿನ ಕಣ್ಣು... ಟಾಸ್ಕ್ ಫೋರ್ಸ್ನಿಂದ ನಾಲ್ವರು ವಶಕ್ಕೆ - Kalburgi
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾ ತಡೆಗಟ್ಟಲು ನಿಯೋಜಿಸಲಾದ ವಿವಿಧ ಇಲಾಖೆ ಅಧಿಕಾರಿಗಳ ಸ್ಯಾಂಡ್ ಟಾಸ್ಕ್ ಫೋರ್ಸ್ ತಂಡ, ಅಕ್ರಮ ಮರಳುಗಾರಿಕೆ ಮೇಲೆ ಹದ್ದಿನ ಕಣ್ಣಿಟಿದ್ದು, ಮರಳುಗಾರಿಕೆಯಲ್ಲಿ ತೊಡಗಿದ್ದವರನ್ನ ವಶಕ್ಕೆ ಪಡೆದಿದೆ.
![ಮರಳು ಮಾಫಿಯಾ ಮೇಲೆ ಜಿಲ್ಲಾಡಳಿತದ ಹದ್ದಿನ ಕಣ್ಣು... ಟಾಸ್ಕ್ ಫೋರ್ಸ್ನಿಂದ ನಾಲ್ವರು ವಶಕ್ಕೆ](https://etvbharatimages.akamaized.net/etvbharat/prod-images/768-512-3707970-thumbnail-3x2-sow.jpg)
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾ ತಡೆಗಟ್ಟಲು ನಿಯೋಜಿಸಲಾದ ವಿವಿಧ ಇಲಾಖೆ ಅಧಿಕಾರಿಗಳ ಸ್ಯಾಂಡ್ ಟಾಸ್ಕ್ ಫೋರ್ಸ್ ತಂಡ, ಅಕ್ರಮ ಮರಳುಗಾರಿಕೆ ಮೇಲೆ ಹದ್ದಿನ ಕಣ್ಣಿಟಿದೆ. ಅಕ್ರಮವಾಗಿ ಸಂಗ್ರಹಿಸಿದ್ದ ಟನ್ಗಟ್ಟಲೆ ಮರಳು, ವಾಹನಗಳು ಹಾಗೂ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದವರನ್ನ ವಶಕ್ಕೆ ಪಡೆಯಲಾಗಿದೆ.
ಅಫ್ಜಲ್ಪುರದಲ್ಲಿ 434 ಟನ್ ಮರಳು ಮತ್ತು ಎರಡು ಟಿಪ್ಪರ್, ಒಂದು ಜೆಸಿಬಿ ಹಾಗೂ ನಾಲ್ಕು ಜನ ಅಕ್ರಮವಾಗಿ ಮರಳು ಸಾಗಿಸುತ್ತಿದ್ದವರನ್ನು ಟಾಸ್ಕ್ ಫೋರ್ಸ್ ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು, ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಎರಡು ಟ್ರ್ಯಾಕ್ಟರ್ ಹಾಗೂ ಒಂದು ಟಿಪ್ಪರ್ ವಶಪಡಿಸಿಕೊಳ್ಳಲಾಗಿದೆ.
TAGGED:
Kalburgi