ಕಲಬುರಗಿ: ರೌಡಿಶೀಟರ್ ಶ್ರೀಕಾಂತ್ ಬೆಂಗಳೂರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿಯ ರಾಮನಗರ ನಿವಾಸಿಗಳಾದ ಅಂಬರೀಷ್ ಗುತ್ತೇದಾರ್ ಹಾಗೂ ಸಂಜೀವಕುಮಾರ್ ಗುತ್ತೇದಾರ್ ಬಂಧಿತರು.
ಶನಿವಾರ ರೌಡಿಶೀಟರ್ ಶ್ರೀಕಾಂತ್ ಗೆ ಕಂಠಪೂರ್ತಿ ಕುಡಿಸಿ ಹುಮನಾಬಾದ್ ರಸ್ತೆಯ ರಾಮನಗರದ ಬಳಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದರು.
ರೌಡಿಶೀಟರ್ ಶ್ರೀಕಾಂತ್ ಬೆಂಗಳೂರೆ ಕೊಲೆಯಾದ ಶ್ರೀಕಾಂತ ಹಾಗೂ ಬಂಧಿತ ಆರೋಪಿಗಳಿಬ್ಬರು ಸ್ನೇಹಿತರಾಗಿದ್ದು, ವೈಯಕ್ತಿಕ ದ್ವೇಷ ಹಾಗೂ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದ್ದಾಗಿ ವಿಚಾರಣೆಯ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.
ಕೊಲೆಯಾದ ಶ್ರೀಕಾಂತ್ ಹಾಗೂ ಕೊಲೆ ಆರೋಪಿ ಅಂಬರೀಷ್ ಗುತ್ತೇದಾರ್ ಇಬ್ಬರು ಈ ಹಿಂದೆ ಹತ್ಯೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಓದಿ:ಮಾಧ್ಯಮದವರನ್ನು ಕಂಡು ಎಚ್ಚೆತ್ತ ಆಸ್ಪತ್ರೆ ಆಡಳಿತ ಮಂಡಳಿ : ಮೃತ ಯೋಧನ ದೇಹ ಕುಟುಂಬಸ್ಥರಿಗೆ ಹಸ್ತಾಂತರ