ಕಲಬುರಗಿ : ನಗರದಲ್ಲಿ ಹಾಡಹಗಲೇ ಲಾಂಗು, ಮಚ್ಚುಗಳು ಝಳಪಿಸಿವೆ. ಜನಸಂದಣಿ ನಡುವೆ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಶಹಾಬಜಾರ್ನಲ್ಲಿ ನಡೆದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ರಾಘು (28) ಎಂಬಾತನೆ ಕೊಲೆಯಾದ ರೌಡಿಶೀಟರ್ ಎಂದು ಗುರುತಿಸಲಾಗಿದೆ.
ಕೊಲೆಯಾದ ರಾಘು, ರೌಡಿಶೀಟರ್ ಮಾರ್ಕೆಟ್ ಸತ್ಯನ ಸಹಚರನಾಗಿದ್ದ. ಹಳೆ ವೈಷ್ಯಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮುಖ ಸೇರಿದಂತೆ ದೇಹದ ಮೇಲೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆಗೈದು ಹಂತಕರು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ರಾಘು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.