ಕಲಬುರಗಿ: ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಅಫಜಲಪುರದಲ್ಲಿ ರಸ್ತೆ ರೋಖೋ ನಡೆಸಿದೆ.
ಅಫಜಲಪುರದಲ್ಲಿ ರೈತರಿಂದ ರಸ್ತೆ ರೋಖೋ ಚಳವಳಿ - Protest by farmers in Afzalpur
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತಂದಿವೆ ಎಂದು ಕಲಬುರಗಿಯ ಅಫಜಲಪುರದಲ್ಲಿ ರಸ್ತೆ ರೋಖೋ ಚಳವಳಿ ನಡೆಸಲಾಗಿದೆ.
ಅಫಜಲಪುರದಲ್ಲಿ ರೈತರಿಂದ ರಸ್ತೆ ರೋಖೋ ಚಳವಳಿ
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ರೈತರು, ಕೂಡಲೇ ರೈತ ವಿರೋಧಿ ತಿದ್ದುಪಡಿಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
ರಸ್ತೆ ತಡೆ ನಡೆಸಿದ್ದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಜೆ.ಎಂ. ಕೊರಂಬು ಫೌಂಡೇಶನ್, ಜೆಡಿಎಸ್ನಿಂದ ರಸ್ತೆ ರೋಖೋಗೆ ಬೆಂಬಲ ವ್ಯಕ್ತವಾಗಿದೆ.