ಕಲಬುರಗಿ:ಜಿಲ್ಲೆಯಲ್ಲಿ ಸುರಿದ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಅಫ್ಜಲ್ಪುರ ತಾಲೂಕಿನ ಹರಸಗುಂಡಗಿಯಲ್ಲಿ ಮಳೆಗೆ ಪ್ರಮುಖ ರಸ್ತೆ ಕೊಚ್ಚಿಹೋಗಿದೆ.
ಕಲಬುರಗಿಯಲ್ಲಿ ಮಳೆ ಅವಾಂತರ: ಕೊಚ್ಚಿ ಹೋದ ಪ್ರಮುಖ ರಸ್ತೆ - ಕಲಬುರಗಿ ಮಳೆಗೆ ರಸ್ತೆ ಬಂದ್
ಕಲಬುರಗಿಯಲ್ಲಿ ಮೊನ್ನೆ ಸುರಿದ ಮಳೆ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. ಜಿಲ್ಲೆಯ ಪ್ರಮುಖ ರಸ್ತೆಗಳು ಕೊಚ್ಚಿ ಹೋಗಿದ್ದು ಜನ ಓಡಾಟಕ್ಕೆ, ವಾಹನ ಸಂಚಾರಕ್ಕೆ ಕಷ್ಟಕರವಾಗಿದ್ದು, ಕಾಯಕಲ್ಪ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Kalburgi
ತೆಗ್ಗಳ್ಳಿ, ಚೌಡಾಪೂರ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದ್ದು, ಜನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಳೆ ಅಥವಾ ನದಿಯಲ್ಲಿ ನೆರೆಯುಂಟಾದರೆ. ಈ ರಸ್ತೆ ಬಂದ್ ಆಗುತ್ತಿದ್ದು, ಅಕ್ಕಪಕ್ಕದ ನೂರಾರು ಏಕರೆ ಜಮೀನಿಗೆ ನೀರು ಹೊಕ್ಕು ಅನ್ನದಾತ ಬೆಳೆದ ಬೆಳೆ ನಷ್ಟವಾಗುತ್ತಿದೆ.
ಓವರ್ ಬ್ರಿಡ್ಜ್ ನಿರ್ಮಾಣ ಮಾಡುವ ಮೂಲಕ ರಸ್ತೆ ಸಂಪರ್ಕ ಸುಗಮಗೊಳಿಸಿ ರೈತರ ಬೆಳೆ ನಷ್ಟವಾಗದಂತೆ ಮಾರ್ಗ ಕಲ್ಪಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.