ಕಲಬುರಗಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಪರಿಣಾಮ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಬಹುತೇಕ ಭರ್ತಿಯಾಗಿದೆ.
ಉಕ್ಕಿ ಹರಿದ ಭೀಮಾ ನದಿ..ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತ ಮಹಾರಾಷ್ಟ್ರದ ವೀರ್ ಜಲಾಶಯದಿಂದ 1.84 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿರುವ ಪರಿಣಾಮ ಅಫಜಲಪೂರ ತಾಲೂಕಿನ ಸೊನ್ನ ಬಳಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಭೀಮಾ ಏತ ನೀರಾವರಿ ಯೋಜನೆ (ಸೊನ್ನ ಬ್ಯಾರೇಜ್) ಬಹುತೇಕ ಭರ್ತಿಯಾಗಿದೆ. 3.166 ಟಿಎಂಸಿ ಸಾಮರ್ಥ್ಯದ ಬ್ಯಾರೇಜ್ನಲ್ಲಿ ಸದ್ಯ 2.902 ಟಿಎಂಸಿ ಅಂದರೆ ಶೇ .92 ರಷ್ಟು ನೀರು ಶೇಖರಣೆಯಾಗಿದೆ.
ಮಣ್ಣೂರು ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತ ಬ್ಯಾರೇಜ್ಗೆ ಹೆಚ್ಚುವರಿ ನೀರು ಹರಿದು ಬರುತ್ತಿರುವ ಹಿನ್ನೆಲೆ ಸೊನ್ನ ಬ್ಯಾರೇಜ್ನಿಂದ 1.86 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಹರಿ ಬೀಡಲಾಗುತ್ತಿದೆ. ಭೀಮಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಅಫಜಲಪುರ ತಾಲೂಕಿನ ಮಣ್ಣೂರು ಯಲ್ಲಮ್ಮ ದೇವಿ ದೇವಸ್ಥಾನ ಮುಳುಗಡೆಯಾಗಿದೆ. ಘತ್ತರಗಿ, ಗಾಣಗಾಪುರ ಮೇಲ್ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಇದನ್ನೂ ಓದಿ:ಕಲಬುರಗಿಯಲ್ಲಿ ವರುಣನ ಅಬ್ಬರ: ಹಲವಡೆ ಸಂಪರ್ಕ ಕಡಿತ, ಶಾಲಾ ಮಕ್ಕಳು, ರೈತರು ತತ್ತರ