ಕಲಬುರಗಿ:ಬಸ್ ಡೋರ್ನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಯುವಕ ಆಯತಪ್ಪಿ ರಸ್ತೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕಲಬುರಗಿ ಹೊರವಲಯದಲ್ಲಿರುವ ನಂದೂರ ಕ್ರಾಸ್ ಬಳಿ ನಡೆದಿದೆ.
ಕಲಬುರಗಿಯಲ್ಲಿ ಬಸ್ನಿಂದ ಆಯತಪ್ಪಿ ಬಿದ್ದು ಯುವಕ ದುರ್ಮರಣ - undefined
ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡೋರ್ನಲ್ಲಿ ನಿಂತಿದ್ದ ಯುವಕ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ನಂದೂರ ಕ್ರಾಸ್ ಬಳಿ ನಡೆದಿದೆ.
![ಕಲಬುರಗಿಯಲ್ಲಿ ಬಸ್ನಿಂದ ಆಯತಪ್ಪಿ ಬಿದ್ದು ಯುವಕ ದುರ್ಮರಣ](https://etvbharatimages.akamaized.net/etvbharat/images/768-512-2958366-thumbnail-3x2-saavu.jpg)
ಮೃತ ಯುವಕ
ಹಳೆ ಶಹಾಬಾದ್ ನಿವಾಸಿ ಬಸವರಾಜ ಮಂಗಲಗಿ (18) ಮೃತ ಯುವಕ. ಈತ ನಗರದ ಖಾಸಗಿ ಕಾಲೇಜ್ವೊಂದರಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ. ಎಂದಿನಂತೆ ಶಹಾಬಾದ್ದಿಂದ ಕಲಬುರಗಿಗೆ ಬರುವಾಗ ಬಾಗಿಲು ಬಳಿ ನಿಂತಿದ್ದ. ಈ ವೇಳೆ ಆಯತಪ್ಪಿ ಬಸ್ನಿಂದ ರಸ್ತೆ ಮೇಲೆ ಬಿದ್ದಿದ್ದಾನೆ. ಬಸ್ ಹಿಂಭಾಗದ ಟೈಯರ್ಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕಲಬುರಗಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.