ಕಲಬುರಗಿ:ಟಂಟಂ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ತಾಪುರ ಬಳಿ ನಡೆದಿದೆ.
ಟಂಟಂ, ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು - ರಸ್ತೆ ಅಪಘಾತಕ್ಕೆ ಇಬ್ಬರು ಬಲಿ
ಕಲಬುರಗಿಯ ಚಿತ್ತಾಪುರ ಪಟ್ಟಣದಿಂದ ವಾಡಿ ಕಡೆ ಹೊರಟ್ಟಿದ್ದ ಟಂಟಂ, ಬೈಕ್ಗೆ ಗುದ್ದಿದ ಪರಣಾಮ ಬೈಕ್ ಸವಾರರಿಬ್ಬರು ದಾರುಣವಾಗಿ ಸಾವಿಗೀಡಾಗಿದ್ದಾರೆ.
ಟಂಟಂ, ಬೈಕ್ ನಡುವೆ ಮುಖಾಮುಖಿ ಡಿಕ್ಕಿ
ಅಲ್ಲೂರ (ಬಿ) ಗ್ರಾಮದ ಮಹಾದೇವ ಅಳ್ಳದ (45) ಮತ್ತು ಲಕ್ಷ್ಮಿಪುರ ವಾಡಿ ನಿವಾಸಿ ಮನೋಹರ ರಾಠೋಡ (40) ಮೃತ ಬೈಕ್ ಸವಾರರು.
ಚಿತ್ತಾಪುರ ಪಟ್ಟಣದಿಂದ ವಾಡಿ ಕಡೆ ಹೊರಟ್ಟಿದ್ದ ಟಂಟಂ, ಬೈಕ್ಗೆ ಗುದ್ದಿದ ಪರಿಣಾಮ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲದೇವರ ಮತ್ತು ಪಿಎಸ್ಐ ಶ್ರೀಶೈಲ ಅಂಬಾಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.