ಕಲಬುರಗಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಏಳು ಜನ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಕಲಬುರಗಿ ಹೊರವಲಯದ ಆಳಂದ ರಸ್ತೆಯ ಸಾವಳಗಿ ಬಳಿ ನಡೆದಿದೆ.
ಕಲಬುರಗಿಯಲ್ಲಿ ಭೀಕರ ಅಪಘಾತ: ನಿಂತಿದ್ದ ಲಾರಿಗೆ ಕಾರ್ ಡಿಕ್ಕಿಯಾಗಿ 7 ಜನರ ದುರ್ಮರಣ - ನಿಂತಿದ್ದ ಲಾರಿಗೆ ಕಾರ್ ಡಿಕ್ಕಿಯಾಗಿ 7 ಜನರ ದುರ್ಮರಣ
ನಿಂತಿದ್ದ ಲಾರಿಗೆ ಕಾರ್ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 7 ಜನರು ಸಾವಿಗೀಡಾಗಿದ್ದಾರೆ. ಕಲಬುರಗಿಯ ಆಳಂದ ರಸ್ತೆಯ ಸಾವಳಗಿ ಬಳಿ ಈ ಘಟನೆ ಜರುಗಿದೆ.

ಕಾರ್ ಡಿಕ್ಕಿಯಾಗಿ 7 ಜನರ ಸಾವು
ಇರ್ಫಾನಾ ಬೇಗಂ (25), ರುಚಿಯಾ ಬೇಗಂ (50), ಅಬೇದಾಬಿ ಬೇಗಂ (50) , ಮುನೀರ್ (28), ಮಹಮ್ಮದ್ ಅಲಿ (38), ಶೌಕತ್ ಅಲಿ (29), ಜಯಚುನಬಿ (60) ಸ್ಥಳದಲ್ಲೇ ಮೃತಪಟ್ಟವರು.
ಮೃತರು ಆಳಂದ ತಾಲೂಕಿನ ನಿವಾಸಿಗಳಾಗಿದ್ದಾರೆ. ಹೆರಿಗೆ ಮಾಡಿಸಲು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಈ ದುರಂತ ಸಂಭವಿಸಿದೆ. ಗರ್ಭಿಣಿ ಸೇರಿ ನಾಲ್ವರು ಮಹಿಳೆಯರು, ಮೂವರು ಪುರುಷರು ದಾರುಣವಾಗಿ ಅಸುನೀಗಿದ್ದಾರೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Last Updated : Sep 27, 2020, 11:45 AM IST