ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು; ಸೆಲ್ಫಿಗೆ ಮುಗಿಬಿದ್ದ ಜನ! - Rivers are full in Kalaburgi

ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ಬ್ರಿಜ್ ಕಂ ಬ್ಯಾರೇಜ್​ನಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಇದನ್ನು ನೋಡಲು ಜನ ಬರುತ್ತಿರುವುದು ಸಾಮಾನ್ಯವಾಗಿದೆ.

ಅಪಾಯವನ್ನು ಲೆಕ್ಕಿಸದೆ ಪೋಟೋಗೆ ಮುಗಿಬಿದ್ದ ಜನ
ಅಪಾಯವನ್ನು ಲೆಕ್ಕಿಸದೆ ಪೋಟೋಗೆ ಮುಗಿಬಿದ್ದ ಜನ

By

Published : Jul 18, 2020, 11:49 PM IST

ಕಲಬುರಗಿ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸತತ ಮಳೆ ಸುರಿಯುತ್ತಿದ್ದು ಜಿಲ್ಲೆಯ ಕಾಗಿಣಾ, ಭೀಮಾ ನದಿ ಮೈತುಂಬಿ ಹರಿಯುತ್ತಿವೆ.

ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ಬ್ರಿಜ್ ಕಂ ಬ್ಯಾರೇಜ್​ನಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಇದನ್ನು ನೋಡಲು ಜನ ಬರುತ್ತಿರುವುದು ಸಾಮಾನ್ಯವಾಗಿದೆ.

ನಾಗರಾಳದ ಮುಲ್ಲಾಮಾರಿ, ಬೆಣ್ಣೆತೋರಾ, ಗಂಡೋರಿ ನಾಲಾದಿಂದ ಸಹ ನೀರು ಹರಿಬಿಟ್ಟಿದ್ದು, ನೀರಿನ ಪ್ರಮಾಣ ಹೆಚ್ಚಾಗಿದೆ. ಕಾಗಿಣಾ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯುತ್ತಿದ್ದರೂ ಜನ ಮಾತ್ರ ಸೇತುವೆಯ ಬಳಿಯೇ ನಿಂತು ವೀಕ್ಷಿಸುತ್ತಿರುವುದು ಅಪಾಯಕ್ಕೆ ಮುನ್ನುಡಿ ಬರೆದಂತಿದೆ.

ಧುಮ್ಮಿಕ್ಕಿ ಹರಿಯುತ್ತಿರುವ ಕಾಗಿಣಾ ನದಿ‌ ವೀಕ್ಷಣೆಗೆ ಆಗಮಿಸಿದ ಜನ ಸೇತುವೆ ಮೇಲೆಯೇ ಸೆಲ್ಫಿ, ಪೋಟೋ ಹಾಗೂ ವಿಡಿಯೋ ತೆಗೆದುಕೊಳ್ಳುತ್ತಿದ್ದಾರೆ.

ABOUT THE AUTHOR

...view details