ಕರ್ನಾಟಕ

karnataka

ETV Bharat / state

ಕಲಬುರ್ಗಿಯಲ್ಲಿ ಮತ್ತೆ ತನ್ನ ಅಟ್ಟಹಾಸ ಮುಂದುವರೆಸಿದ ಕೊರೊನಾ!! - Rise of covid-19 cases

40 ಜನ ಮಹಾರಾಷ್ಟ್ರದಿಂದ ವಾಪಸಾದ ವಲಸಿಗರಾಗಿದ್ದು, ಎಲ್ಲರೂ ಕ್ವಾರಂಟೈನ್ ಕೇಂದ್ರದಲ್ಲಿದ್ದವರಾಗಿದ್ದಾರೆ.

Rise of covid-19 cases in Kalaburagi
ಸಂಗ್ರಹ ಚಿತ್ರ

By

Published : Jun 5, 2020, 8:17 PM IST

ಕಲಬುರಗಿ :ಮಹಾಮಾರಿ ಕೊರೊನಾ ಕಲಬುರ್ಗಿಯಲ್ಲಿ ಮತ್ತೆ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಇಂದು ಮತ್ತೆ ಜಿಲ್ಲೆಯಲ್ಲಿ 42 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 552ಕ್ಕೆ ಏರಿಕೆಯಾಗಿದೆ.

ಎರಡು ದಿನಗಳ ಕಾಲ ಶತಕ ಗಡಿದಾಟುವ ಮೂಲಕ ಅಬ್ಬರಿಸಿದ್ದ ಕೊರೊನಾ ನಿನ್ನೆ ಯಾವುದೇ ವರದಿ ಬಂದಿರಲಿಲ್ಲ. ಇಂದು ಮತ್ತೆ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, 15 ಮಕ್ಕಳು, 7 ಮಹಿಳೆಯರು ಮತ್ತು 20 ಪುರುಷರಿಗೆ ಕೊರೊನಾ ತಗುಲಿರುವುದು ವೈದ್ಯಕೀಯ ವರದಿಯಿಂದ ಸಾಬೀತಾಗಿದೆ. ಇದರಲ್ಲಿ ಓರ್ವ 46 ವರ್ಷದ ಪುರುಷ P-4493 ತೆಲಂಗಾಣದಿಂದ ವಾಪಸಾಗಿದ್ದಾನೆ ಎನ್ನಲಾಗುತ್ತಿದೆ.

ಇನೋರ್ವ 26 ವರ್ಷದ ಪುರುಷ P-4446 ಟ್ರಾವೆಲ್ ಹಿಸ್ಟರಿ ಸದ್ಯ ಲಭ್ಯವಾಗಿಲ್ಲ. ಉಳಿದ 40 ಜನ ಮಹಾರಾಷ್ಟ್ರದಿಂದ ವಾಪಸಾದ ವಲಸಿಗರಾಗಿದ್ದು, ಎಲ್ಲರೂ ಕ್ವಾರಂಟೈನ್ ಕೇಂದ್ರದಲ್ಲಿದ್ದವರಾಗಿದ್ದಾರೆ. ಇಂದು ಮತ್ತೋರ್ವ ವ್ಯಕ್ತಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾನೆ.

ABOUT THE AUTHOR

...view details