ಕರ್ನಾಟಕ

karnataka

ETV Bharat / state

ಕಲಬುರಗಿ: ನಿವೃತ್ತ ಯೋಧನಿಗೆ 27 ಲಕ್ಷ ರೂ ವಂಚನೆ! - ETV Bharat kannada News

ನಿವೃತ್ತ ಯೋಧನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ.

Cheated retired soldier
ವಂಚನೆಗೊಳಾಗದ ವುವೃತ್ತ ಯೋಧ

By

Published : Feb 5, 2023, 9:19 AM IST

ಕಲಬುರಗಿ :ನಿವೃತ್ತ ಯೋಧನನ್ನು ಗಾರ್ಡ್ ಆಗಿ ನೇಮಿಸಿಕೊಂಡಿದ್ದ ವ್ಯಕ್ತಿಯೊಬ್ಬ ತಾನು ಮುಂಬರುವ ದಿನಗಳಲ್ಲಿ ರಾಜ್ಯಪಾಲನಾಗಿ ಆಯ್ಕೆಯಾಗಲಿದ್ದೇನೆ. ಆಗ ನಿಮ್ಮನ್ನೇ ಸರ್ಕಾರಿ ಗಾರ್ಡ್ ಆಗಿ ನೇಮಕ ಮಾಡಿಕೊಳ್ಳುತ್ತೇನೆ ಎಂದೆಲ್ಲಾ ಸುಳ್ಳು ಹೇಳಿ ನಂಬಿಸಿ 27 ಲಕ್ಷ ರೂಪಾಯಿ ಮೋಸ ಮಾಡಿದ್ದಾನೆ. ಮಾರುತಿ ಘೋಡಕೆ ಹಣ ಕಳೆದುಕೊಂಡಿರುವ ನಿವೃತ್ತ ಯೋಧ. ಇವರು ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನಿವಾಸಿ.

ವಿವರ:ಮಾರುತಿ ಘೋಡಕೆ ಸೇನೆಯಿಂದ ನಿವೃತ್ತಿಯಾದ ಬಳಿಕ ಊರಿಗೆ ಮರಳಿದ್ದರು. ಮನೆಯಲ್ಲಿ ಖಾಲಿ ಇರೋದು ಬೇಡ ಅಂತ ಜೈ ಸೆಕ್ಯೂರಿಟಿ ಗಾರ್ಡ್ ಮ್ಯಾನ್‌ಪವರ್ ಸಂಸ್ಥೆಯಲ್ಲಿ ಗಾರ್ಡ್ ಕೆಲಸಕ್ಕೆ ಸೇರಿಕೊಂಡಿದ್ದರು. ಸಂಸ್ಥೆಯವರು ಮಾರುತಿ ಅವರನ್ನು ಕಲಬುರಗಿ ನಗರದ ರಿಂಗ್ ರಸ್ತೆಯ ಹೊಸ ಬಡಾವಣೆ ನಿವಾಸಿ ಶಾಂತಕುಮಾರ್ ಜೆಟ್ಟೂರು ಬಳಿ ಭದ್ರತಾಧಿಕಾರಿಯಾಗಿ ನಿಯೋಜಿಸಿದ್ದಾರೆ.

ಶಾಂತಕುಮಾರ್ ಜೆಟ್ಟೂರ್, ನಿವೃತ್ತ ಯೋಧನನ್ನು ಕೆಲಸಕ್ಕೆ ನೇಮಕ ಮಾಡಿಕೊಂಡ ನಂತರ ವೇತನ ನೀಡುವ ಬದಲು, ತಾನು ತೆಲಂಗಾಣದ ರಾಜ್ಯಪಾಲನಾಗಲಿದ್ದೇನೆ. ನಂತರ ನಿಮ್ಮನ್ನು ಖಾಯಂ ಆಗಿ ನಾನೇ ನೇಮಕ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿದ್ದಾನಂತೆ. ಅಷ್ಟೇ ಅಲ್ಲ, ತೆಲಂಗಾಣ, ದೆಹಲಿ ಸೇರಿದಂತೆ ನಾನಾ ಕಡೆ ಮಾರುತಿಯನ್ನು ಕರೆದುಕೊಂಡು ಹೋಗಿ ಅಲ್ಲಿರುವ ಕೆಲವು ವ್ಯಕ್ತಿಗಳನ್ನು ಪರಿಚಯಿಸಿ ರಾಜ್ಯಪಾಲನಾಗುವ ಬಗ್ಗೆ ನಂಬಿಕೆ ಹುಟ್ಟಿಸಿದ್ದಾನೆ.

ಆದರೆ, ರಾಜ್ಯಪಾಲನಾಗಲು ಸ್ವಲ್ಪ ಹಣ ಬೇಕಿದೆ. ನನ್ನ ಅಕೌಂಟ್​ನಲ್ಲೇ ಹಣ ಇದೆ. ಆದರೆ ಪ್ರೊಟೋಕಾಲ್ ಪ್ರಕಾರ ಅದನ್ನು ತೆಗೆಯಲು ಸಾಧ್ಯವಿಲ್ಲ. ಒಂದೂವರೆ ತಿಂಗಳ ಸಲುವಾಗಿ ಹಣ ಅಡ್ಜೆಸ್ಟ್ ಮಾಡಿ ಅಂತ ಹೇಳಿ ಮಾರುತಿ ಅವರಿಂದ 27 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ. ಶಾಂತಕುಮಾರ್ ಜೆಟ್ಟೂರ್ ಮಾತು ನಂಬಿದ ಮಾರುತಿ, ಆತನ ಮನೆಯನ್ನು ಗುಂಡಪ್ಪ ಅನ್ನೋ ಕಾರ್ಪೆಂಟರ್ ಮುಖಾಂತರ ನವೀಕರಿಸಿದ್ದಾನೆ. ಗುಂಡಪ್ಪ ತನ್ನ ಬಳಿಯಿದ್ದ ಒಂದೂವರೆ ಲಕ್ಷ ಹಣವನ್ನೂ ಹಾಕಿ ಶಾಂತಕುಮಾರ್ ಮನೆಯನ್ನು ನವೀಕರಣಗೊಳಿಸಿದ್ದಾನೆ. ಇದಾದ ನಂತರ ಮನೆಗೆ ಹಾಕಿದ ಹಣ ಕೂಡ ಶಾಂತಕುಮಾರ್ ಜೆಟ್ಟೂರ್ ಕೊಟ್ಟಿರಲಿಲ್ಲ. ಗುಂಡಪ್ಪ, ನಿವೃತ್ತ ಯೋಧನ ಬಳಿ ಹಣ ಕೇಳಿದರೆ ತಾನೂ ಕೂಡ 25 ಲಕ್ಷ ರೂ ಕೊಟ್ಟಿದ್ದೇನೆ ಎಂದು ಹೇಳಿದ್ದಾನೆ.

ತಿಂಗಳುಗಳು ಉರುಳಿದರೂ ಕೆಲಸಕ್ಕೂ ನೇಮಕ ಮಾಡಿಕೊಂಡಿಲ್ಲ, ಇತ್ತ ಇಬ್ಬರಿಗೂ ಆತ ಹಣ ವಾಪಸ್ ಕೊಟ್ಟಿರಲಿಲ್ಲ. ಹಣ ಕೇಳಿದಾಗಲೆಲ್ಲಾ ಇಬ್ಬರನ್ನೂ ಹೆದರಿಸಿ ಕಳುಹಿಸಿದ್ದಾನೆ. ಸಾಕಷ್ಟು ಅಲೆದು ಸುಸ್ತಾಗಿ ಇದೀಗ ಕಲಬುರಗಿಯ ಎಮ್​.ಬಿ.ನಗರ ಪೊಲೀಸ್ ಠಾಣೆಯಲ್ಲಿ ಮಾರುತಿ ದೂರು ನೀಡಿದ್ದಾರೆ. ಆರೋಪದ ಬಗ್ಗೆ ಸ್ಪಷ್ಟೀಕರಣ ನೀಡಲು‌ ಕಲಬುರಗಿ ಪತ್ರಿಕಾ ಭವನಕ್ಕೆ ಆಗಮಿಸಿದ ಶಾಂತಕುಮಾರ ಜೇಟ್ಟೂರ ನಿರಾಕರಿಸಿದ್ದಾರೆ.

ಜಿಮ್ಸ್ ಅಧಿಕಾರಿ ಲೋಕಾಯುಕ್ತ ಬಲೆಗೆ:ಲಂಚ ಪಡೆಯುವಾಗ ಜಿಮ್ಸ್ ಮೆಡಿಕಲ್ ಕಾಲೇಜಿನ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶನಿವಾರ ಸಂಜೆ 4 ಗಂಟೆಯ ವೇಳೆಗೆ ನಡೆದ ಕಾರ್ಯಾಚರಣೆಯಲ್ಲಿ ಭ್ರಷ್ಟ ಅಧಿಕಾರಿ ಡಾ.ಅಮರ್ ಶೆಟ್ಟಿ ಅವರನ್ನು ಬಂಧಿಸಲಾಗಿದೆ. ಆರೋಪಿ ವ್ಯಕ್ತಿಯೋರ್ವರಿಗೆ ಫಾರ್ಮಸಿ ಬಿಲ್ ಮಾಡಲು ₹5 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ನೊಂದ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಪೂರ್ವ ಯೋಜನೆಯಂತೆ ದೂರು ನೀಡಿದ ವ್ಯಕ್ತಿ ಹಣ ನೀಡಲು ಹೋದಾಗ ಲೋಕಾಯುಕ್ತ ಡಿಎಸ್‌ಪಿ ಸಿದ್ದನಗೌಡ ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಕೋರ್ಟ್​ಗೆ ಶರಣಾಗುವ ಮುನ್ನ ಆರ್ ಡಿ ಪಾಟೀಲ್ ವಿಡಿಯೋ ಬಾಂಬ್: ತನಿಖಾಧಿಕಾರಿ ವಿರುದ್ಧ ಗಂಭೀರ ಆರೋಪ

ABOUT THE AUTHOR

...view details