ಕರ್ನಾಟಕ

karnataka

ETV Bharat / state

ಬ್ಲ್ಯಾಕ್​ ಫಂಗಸ್‌ಗೆ ವಿಜಯಪುರದಲ್ಲಿ ನಿವೃತ್ತ ಹೆಚ್ಚುವರಿ ಎಸ್​ಪಿ ಬಲಿ - Kalaburagi latest news,

Black Fungusನಿಂದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ವಿಜಯಪುರದಲ್ಲಿ ಮೃತಪಟ್ಟಿದ್ದಾರೆ. ಬಿ.ಮಹಾಂತೇಶ್(65) ಮೃತಪಟ್ಟ ನಿವೃತ್ತ ಪೊಲೀಸ್ ಅಧಿಕಾರಿ.

retired additional sp died due to black fungus
ನಿವೃತ್ತ ಹೆಚ್ಚುವರಿ ಎಸ್​ಪಿ ಸಾವು

By

Published : May 30, 2021, 7:54 PM IST

ಕಲಬುರಗಿ: ಬ್ಲ್ಯಾಕ್​ ಫಂಗಸ್‌ನಿಂದ ನಿವೃತ್ತ ಹೆಚ್ಚುವರಿ ಎಸ್ಪಿ ಬಿ.ಮಹಾಂತೇಶ್(65) ಅವರು ವಿಜಯಪುರ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ.

ಮೂಲತಃ ಸಿಂದಗಿ ಮೂಲದ ಬಿ.ಮಹಾಂತೇಶ್(65) ಕಲಬುರಗಿ ಜಿಲ್ಲೆ ಮತ್ತು ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಪೊಲೀಸ್ ಮತ್ತು ಲೋಕಾಯುಕ್ತದಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದರು. ನಿವೃತ್ತಿ ನಂತರ ಕಲಬುರಗಿ ನಗರದಲ್ಲಿ ವಾಸವಾಗಿದ್ದರು. ಇತ್ತೀಚೆಗಷ್ಟೇ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರು.

ಆದರೆ ಮತ್ತೆ ಬ್ಲ್ಯಾಕ್ ಫಂಗಸ್‌ ರೋಗದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಮಹಾಂತೇಶ್ ಇಂದು ಕೊನೆಯುಸಿರೆಳೆದಿದ್ದಾರೆ.

(Black Fungus: ಕಪ್ಪು ಶಿಲೀಂಧ್ರಕ್ಕೆ ರಾಜ್ಯದಲ್ಲಿ 39 ಜನ ಬಲಿ.. ಏರುತ್ತಿದೆ ಸೋಂಕಿತರ ಸಂಖ್ಯೆ)

ABOUT THE AUTHOR

...view details