ಕಲಬುರಗಿ: ವಸತಿ ನಿಲಯದ ವ್ಯವಸ್ಥೆ,ವಿದ್ಯಾರ್ಥಿಗಳ ಮಾಸಿಕ ಸಹಾಯ ಧನ ಹೆಚ್ಚಿಸುವುದು ಸೇರಿದಂತೆ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಇಂದು ನಡೆಯುತ್ತಿರುವ ಯುವಜನೋತ್ಸವ ಸಮಾರಂಭವನ್ನು ಬಹಿಷ್ಕರಿಸಿ ಸಂಶೋಧನಾ ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹ ನಡೆಸಿದ್ದಾರೆ.
ಯುವಜನೋತ್ಸವ ಬಿಟ್ಟು ಪ್ರತಿಭಟನೆಗೆ ಕುಳಿತ ಗುಲ್ಬರ್ಗಾ ವಿವಿ ಸಂಶೋಧನಾ ವಿದ್ಯಾರ್ಥಿಗಳು: ಏನಿವರ ಬೇಡಿಕೆ? - ಯುವಜನೋತ್ಸವ ಸಮಾರಂಭ
ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಇಂದು ನಡೆಯುತ್ತಿರುವ ಯುವಜನೋತ್ಸವ ಸಮಾರಂಭವನ್ನು ಬಹಿಷ್ಕರಿಸಿ ಸಂಶೋಧನಾ ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹ ನಡೆಸಿದರು.
ಸಂಶೋಧನಾ ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ ಸಂಶೋಧನಾ ವಿದ್ಯಾರ್ಥಿಗಳು ವಿವಿ ಆಡಳಿತ ಕಚೇರಿಯ ಎದುರು ಧರಣಿ ನಡೆಸಿದರು. ಒಂದು ಕಡೆ ವಿವಿ ಹಬ್ಬ ಯುವಜನೋತ್ಸ ನಡೆಯುತ್ತಿದ್ದರೆ, ಇನ್ನೊಂದೆಡೆ ವಿದ್ಯಾರ್ಥಿಗಳು ಯುವಜನೋತ್ಸವ ಬಹಿಷ್ಕರಿಸಿ ವಿಶ್ವವಿದ್ಯಾಲಯ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.
ವಸತಿ ನಿಲಯದ ವ್ಯವಸ್ಥೆ ಸರಿಪಡಿಸಬೇಕು ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಮಾಸಿಕ ಸಹಾಯ ಧನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ವಿದ್ಯಾರ್ಥಿಗಳು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿ ಪರಿಮಳ ಅಂಬೇಕ್ಕರ್ ಅವರು ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.