ಕರ್ನಾಟಕ

karnataka

ETV Bharat / state

ತೊಗರಿಗೆ ಪ್ರೋತ್ಸಾಹ ಧನ ನೀಡುವಂತೆ ಆಗ್ರಹ: ಸರ್ಕಾರಕ್ಕೆ 100 ಕೆ.ಜಿ ದಾನ ಮಾಡಿ ರೈತರ ಪ್ರತಿಭಟನೆ - ಅಹೋರಾತ್ರಿ ಧರಣಿ

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕಳೆದ 4 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಆದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಬೆಳೆಗಾರರು, ತೊಗರಿ ದಾನ ಮಾಡಿ ಕೂಡಲೇ ತಮ್ಮ ಹೋರಾಟಕ್ಕೆ ಸ್ಪಂದಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Request to  incentives Pigeon pea: farmers donats 100 kg to government
ರ್ಕಾರಕ್ಕೆ 100 ಕೆಜಿ ದಾನ ಮಾಡಿ ರೈತರ ಪ್ರತಿಭಟನೆ

By

Published : Jan 7, 2021, 8:49 PM IST

ಕಲಬುರಗಿ: ತೊಗರಿ ಬೆಳೆಗೆ ಪ್ರೋತ್ಸಾಹ ಧನ ನೀಡದ ಸರ್ಕಾರದ ವಿರುದ್ಧ ಪ್ರತಿಭಟಿಸಿರುವ ರೈತರು, ಪೋಸ್ಟ್ ಮೂಲಕ ತೊಗರಿ ಕಾಳು ಕಳುಹಿಸಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ತೊಗರಿಗೆ ಪ್ರೊತ್ಸಾಹ ಧನ ನೀಡಲು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕಳೆದ 4 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ.

ತೊಗರಿಗೆ ಪ್ರೋತ್ಸಾಹ ಧನ ನೀಡುವಂತೆ ಆಗ್ರಹಿಸಿ ಪ್ರತಭಟಿಸುತ್ತಿರುವ ರೈತರು

ಆದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಬೆಳೆಗಾರರು ತೊಗರಿ ದಾನ ಮಾಡಿ ಕೂಡಲೆ ತಮ್ಮ ಹೋರಾಟಕ್ಕೆ ಸ್ಪಂದಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಸುಮಾರು 100 ಜನ ರೈತರು ತಲಾ 1 ಕೆ.ಜಿ ತೊಗರಿಯನ್ನು ಸರ್ಕಾರಕ್ಕೆ ದಾನದ ರೂಪದಲ್ಲಿ ರವಾನಿಸಿದ್ದಾರೆ.

ಇದನ್ನೂ ಓದಿ:ದಾವಣಗೆರೆಯಲ್ಲಿ ಶಾರ್ಟ್ ಸರ್ಕ್ಯೂಟ್​​​ನಿಂದ ಹೊತ್ತಿ ಉರಿದ ಹೋಟೆಲ್!

ABOUT THE AUTHOR

...view details