ಕಲಬುರಗಿ: ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವ ಕಾರಣ ಜಿಲ್ಲೆಯಲ್ಲಿ ಪ್ರವಾಹ ಭೀತಿ ಉಂಟಾಗಿದ್ದು, ಅಫಜಲಪುರ ತಾಲೂಕಿನ ಬೋಸಗಾ, ದುದ್ದಣಗಿ, ಉಡಚಾಣ, ಸೊನ್ನ ಗ್ರಾಮಗಳಿಗೆ ನೀರು ಸುತ್ತುವರೆದಿದೆ.
ನಡುಗಡ್ಡೆಯಂತಾದ ಬೋಸಗಾ ಗ್ರಾಮ: ಸುರಕ್ಷಿತ ಪ್ರದೇಶಗಳಿಗೆ ಜನರ ಸ್ಥಳಾಂತರ - bheema river flood news
ಭೀಮಾ ನದಿ ನೀರಿನಿಂದ ಅಫಜಲಪುರ ತಾಲೂಕಿನ ಬೋಸಗಾ ಗ್ರಾಮ ಸಂಪೂರ್ಣ ನಡುಗಡ್ಡೆಯಂತಾಗಿದ್ದು, ಗಂಟು-ಮೂಟೆ ಸಮೇತ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ನಡುಗಡ್ಡೆಯಂತಾದ ಬೋಸಗಾ ಗ್ರಾಮ: ಸುರಕ್ಷಿತ ಪ್ರದೇಶಗಳಿಗೆ ಜನರ ಸ್ಥಳಾಂತರ
ಬೋಸಗಾ ಗ್ರಾಮ ಸಂಪೂರ್ಣ ನಡುಗಡ್ಡೆಯಂತಾಗಿದ್ದು, ಗಂಟು-ಮೂಟೆ ಸಮೇತ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳದಲ್ಲಿಯೇ ಬೀಡುಬಿಟ್ಟಿರುವ ಎಸಿ ರಾಮಚಂದ್ರ ಹಾಗೂ ಸಿಬ್ಬಂದಿ, ಗ್ರಾಮಸ್ಥರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ.
ಸೊನ್ನ ಬ್ಯಾರೇಜ್ ಸಂಪೂರ್ಣ ಭರ್ತಿಯಾದ ಕಾರಣ ಕಲಬುರಗಿ ಹಾಗೂ ವಿಜಯಪುರ ಸಂಪರ್ಕ ಕಲ್ಪಿಸುವ ದೇವಣಗಾಂವ ಮತ್ತು ಸೊನ್ನ ಸೇತುವೆ ಸಂಚಾರ ಸ್ಥಗಿತಗೊಳಿಸಲಾಗಿದೆ.