ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಕ್ವಾರಂಟೈನ್​​ಲ್ಲಿದ್ದ 42 ತಬ್ಲಿಘಿಗಳ ಬಿಡುಗಡೆ - Release of 42 Tablighi in Quarantine

ಗುಜರಾತ್ ನ ತಬ್ಲಿಘಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜೇವರ್ಗಿಯ ಚಿಗರಳ್ಳಿ ಮೂಲಕ ಬಳ್ಳಾರಿಗೆ ಹೋಗುತ್ತಿದ್ದ ತಬ್ಲಿಘಿಗಳನ್ನು ಮಾರ್ಚ್ 18 ರಿಂದ ಕ್ವಾರಂಟೈನ್ ಮಾಡಲಾಗಿದ್ದು, ಅವರನ್ನ ಬಿಡುಗಡೆಗೊಳಿಸಲಾಗಿದೆ.

Release of 42 Tablighi in Quarantine at Kalaburagi
ಕ್ವಾರಂಟೈನ್​​ಲ್ಲಿದ್ದ 42 ತಬ್ಲಿಘಿಗಳ ಬಿಡುಗಡೆ

By

Published : Apr 27, 2020, 8:37 AM IST

Updated : Apr 27, 2020, 10:01 AM IST

ಕಲಬುರಗಿ: ಜೇವರ್ಗಿ ತಾಲೂಕಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದ 42 ತಬ್ಲಿಘಿಗಳನ್ನು ಬಿಡುಗಡೆ ಮಾಡಲಾಗಿದೆ.

ಗುಜರಾತ್ ನ ತಬ್ಲಿಘಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜೇವರ್ಗಿಯ ಚಿಗರಳ್ಳಿ ಮೂಲಕ ಬಳ್ಳಾರಿಗೆ ಹೋಗುತ್ತಿದ್ದ ವೇಳೆ ಪೊಲೀಸರು ಇವರನ್ನು ತಡೆದಿದ್ದರು. ಎಲ್ಲರಿಗೂ ಯಾಳವಾರ ಮೊರಾರ್ಜಿ ವಸತಿ ಶಾಲೆಯಲ್ಲಿ ಮಾರ್ಚ್ 18 ರಿಂದ ಕ್ವಾರಂಟೈನ್ ಮಾಡಲಾಗಿತ್ತು.

ಕ್ವಾರಂಟೈನ್​​ಲ್ಲಿದ್ದ 42 ತಬ್ಲಿಘಿಗಳ ಬಿಡುಗಡೆ

ಕ್ವಾರಂಟೈನ್ ಅವಧಿ ಮುಗಿದಿದ್ದರೂ, ಲಾಕ್ ಡೌನ್ ಕಾರಣದಿಂದಾಗಿ ವಸತಿ ಶಾಲೆಯಲ್ಲಿಯೇ ಇರುವಂತಾಗಿತ್ತು. ಆದರೆ ರಾಜ್ಯದ ಒಳಗಡೆ ಬೇರೆ ಬೇರೆ ಜಿಲ್ಲೆಗಳಲ್ಲಿ ಸಿಲುಕಿಕೊಂಡವರಿಗೆ ತಮ್ಮ ಊರುಗಳಿಗೆ ಸೇರಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ, ಶೇ.40 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಿರುವ ನಿಟ್ಟಿನಲ್ಲಿ 42 ಜನರಿಗೆ ಎರಡು ಬಸ್ ಗಳ ವ್ಯವಸ್ಥೆ ಮಾಡಿ, ಒಂದು ಬಸ್ ಬಳ್ಳಾರಿಗೆ ಮತ್ತು ಇನ್ನೊಂದು ಬಸ್ ಸಿರಗುಪ್ಪಕ್ಕೆ ಪ್ರಯಾಣ ಬೆಳೆಸಿತು.

Last Updated : Apr 27, 2020, 10:01 AM IST

ABOUT THE AUTHOR

...view details