ಕರ್ನಾಟಕ

karnataka

ETV Bharat / state

ಮೂರೇ ದಿನದಲ್ಲಿ ಚಿನ್ಮಳ್ಳಿ ಸೇತುವೆ ರಸ್ತೆ ಪುನರ್ ನಿರ್ಮಾಣ, ಈಟಿವಿ ಭಾರತ ಫಲಶ್ರುತಿ - ಅಫಜಲಪುರ ಮತ್ತು ಜೇವರ್ಗಿ ತಾಲೂಕು

ಚಿನ್ಮಳ್ಳಿ ಬಳಿ ನಿರ್ಮಿಸಿದ ಬ್ರೀಡ್ಜ್ ಕಂ ಬ್ಯಾರೇಜ್​ ರಸ್ತೆ ಕಾಮಗಾರಿ ಕಳಪೆಯಾಗಿ ಕೇವಲ 6 ತಿಂಗಳಿಗೆ ಭೀಮಾ ನದಿ ಪ್ರವಾಹದಲ್ಲಿ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿತ್ತು. ಈ ಬಗ್ಗೆ ಈಟಿವಿ ಭಾರತ 'ಆರು ತಿಂಗಳಲ್ಲೆ ಕೊಚ್ಚಿಹೋದ ಸೇತುವೆ' ಎಂದು ಅಕ್ಟೋಬರ್ 30 ರಂದು ವರದಿ ಮಾಡಿತ್ತು..

reconstruction-of-chinmulli-bridge-road-etv-bharat-impact
ಮೂರೇ ದಿನದಲ್ಲಿ ಚಿನ್ಮಳ್ಳಿ ಸೇತುವೆ ರಸ್ತೆ ಪುನರ್ ನಿರ್ಮಾಣ

By

Published : Nov 4, 2020, 6:16 PM IST

ಕಲಬುರಗಿ: 'ಈಟಿವಿ ಭಾರತ' ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಅಫಜಲಪುರ ಮತ್ತು ಜೇವರ್ಗಿ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಭೀಮಾ ನದಿಗೆ ಅಡ್ಡಲಾದ ಸೇತುವೆ ಸಂಪರ್ಕ ರಸ್ತೆಯ ಮರು ನಿರ್ಮಾಣ ಕಾರ್ಯವನ್ನು ಶುರು ಮಾಡಿದ್ದಾರೆ.

ಮೂರೇ ದಿನದಲ್ಲಿ ಚಿನ್ಮಳ್ಳಿ ಸೇತುವೆ ರಸ್ತೆ ಪುನರ್ ನಿರ್ಮಾಣ

ಚಿನ್ಮಳ್ಳಿ ಬಳಿ ನಿರ್ಮಿಸಿದ ಬ್ರೀಡ್ಜ್ ಕಂ ಬ್ಯಾರೇಜ್​ ಸಂಪರ್ಕ ರಸ್ತೆಯನ್ನು ಕಳೆದ ಆರು ತಿಂಗಳ ಹಿಂದಷ್ಟೇ ಕೆಬಿಜೆಎನ್‌ಎಲ್ ಇಲಾಖೆಯಿಂದ 4.90 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಕೇವಲ 200 ಮೀಟರ್ ದೂರದ ಸಂಪರ್ಕ ರಸ್ತೆಯನ್ನು ಸುಮಾರು ₹5 ಕೋಟಿ ಖರ್ಚು ಮಾಡಿದ್ದರು. ಕಾಮಗಾರಿ ಕಳಪೆಯಾಗಿ ಕೇವಲ 6 ತಿಂಗಳಿಗೆ ಭೀಮಾ ನದಿ ಪ್ರವಾಹದಲ್ಲಿ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿತ್ತು.

ಈಬಗ್ಗೆ ಈಟಿವಿ ಭಾರತ 'ಆರು ತಿಂಗಳಲ್ಲೆ ಕೊಚ್ಚಿಹೋದ ಸೇತುವೆ' ಎಂದು ಅಕ್ಟೋಬರ್ 30ರಂದು ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಮೂರೇ ದಿನದಲ್ಲಿ ಸೇತುವೆ ರಸ್ತೆ ಪುನರ್ ನಿರ್ಮಾಣ ಮಾಡಿದ್ದಾರೆ. ಇದು ಈಟಿವಿ ಭಾರತ ವರದಿ ಫಲಶೃತಿಯಾಗಿದ್ದು, ಗ್ರಾಮದ ಜನರು ಈಟಿವಿ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇದನ್ನು ಓದಿ:ಕಲಬುರಗಿಯಲ್ಲಿ ನಿರ್ಮಾಣವಾದ ಆರೇ ತಿಂಗಳಲ್ಲೇ ಸೇತುವೆ ಕೊಚ್ಚಿ ಹೋಗುವುದೇ?

ABOUT THE AUTHOR

...view details