ಕರ್ನಾಟಕ

karnataka

By

Published : Dec 25, 2020, 7:27 AM IST

ETV Bharat / state

ಕಿಣ್ಣಿ ಸಡಕ ಗ್ರಾಪಂ ಮತಗಟ್ಟೆ ಸಂಖ್ಯೆ 7ಕ್ಕೆ ಮರು ಮತದಾನ

ನಿಯೋಜಿಸಿದಂತೆ ನಿನ್ನೆ ಮರು ಮತದಾನ ನಡೆದಿದ್ದು, ಮತ ಚಲಾಯಿಸುವ ಹಕ್ಕು ಹೊಂದಿದ ಒಟ್ಟು 947 ಮತದಾರರ ಪೈಕಿ 563 ಮತದಾರರು ಮತ ಚಲಾಯಿಸಿದ್ದಾರೆ..

ಜ್ಯೋತ್ಸ್ನಾ
Jyotsna

ಕಲಬುರಗಿ :ಕಮಲಾಪೂರ ತಾಲೂಕಿನ ಕಿಣ್ಣಿ ಸಡಕ ಗ್ರಾಮ ಪಂಚಾಯತ್‌ ಮತಗಟ್ಟೆ ಸಂಖ್ಯೆ 7ಕ್ಕೆ ನಡೆದ ಮರು ಮತದಾನದಲ್ಲಿ ಶೇ.59.45 ಮತದಾನವಾಗಿದೆ.

ಮತದಾನದ ಬ್ಯಾಲೇಟ್ ಪೇಪರ್​​​ನಲ್ಲಿ ತುತ್ತೂರಿ ಬದಲು ಕಹಳೆ ಊದುವ ಮನುಷ್ಯ ಚಿಹ್ನೆ ತಪ್ಪಾಗಿ ಮುದ್ರಿತಗೊಂಡ ಹಿನ್ನೆಲೆಯಲ್ಲಿ ಅಭ್ಯರ್ಥಿ ಜೈರಾಜ ಎಂಬುವರು ತಕರಾರು ತೆಗೆದಿದ್ದರು. ಈ ಸಂಬಂಧ ಪರೀಶೀಲಿಸಿ ಡಿ. 24 ರಂದು ಮರು ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿತ್ತು‌.

ನಿಯೋಜಿಸಿದಂತೆ ನಿನ್ನೆ ಮರು ಮತದಾನ ನಡೆದಿದ್ದು, ಮತ ಚಲಾಯಿಸುವ ಹಕ್ಕು ಹೊಂದಿದ ಒಟ್ಟು 947 ಮತದಾರರ ಪೈಕಿ 563 ಮತದಾರರು ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ABOUT THE AUTHOR

...view details