ಕರ್ನಾಟಕ

karnataka

ETV Bharat / state

ಸಾಮಾಜಿಕ ಅಂತರ ಕಾಯ್ದುಕೊಂಡ ಸುಗೂರ ಗ್ರಾಮಸ್ಥರು : ಇತರರಿಗೆ ಮಾದರಿ - ಸಾಮಾಜಿಕ ಅಂತರ ಕಾಯ್ದುಕೊಂಡು ಸುಗೂರ ಗ್ರಾಮದಲ್ಲಿ ರೇಷನ್ ವಿತರಣೆ

ಸಾಮಾಜಿಕ ಅಂತರ ನಿಯಮ ಪಾಲಿಸುವ ಮೂಲಕ ಸುಗೂರ ಗ್ರಾಮದ ಜನತೆ ಇತರರಿಗೆ ಮಾದರಿಯಾಗಿದ್ದಾರೆ.

maintaining social distance
ಸಾಮಾಜಿಕ ಅಂತರ ಕಾಯ್ದುಕೊಂಡು ಸುಗೂರ ಗ್ರಾಮದಲ್ಲಿ ರೇಷನ್ ವಿತರಣೆ

By

Published : Apr 19, 2020, 11:50 PM IST

ಕಲಬುರಗಿ:ಚಿತ್ತಾಪುರ ತಾಲ್ಲೂಕಿನ ಸುಗೂರ (ಕೆ) ಗ್ರಾಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ರೇಷನ್ ವಿತರಿಸಲಾಯಿತು. ಅಲ್ಲದೇ ಸಾರ್ವಜನಿಕರು ರೇಷನ್ ತೆಗೆದುಕೊಂಡು ಹೋಗುವಾಗಲು ಅಂತರ ಕಾಯ್ದುಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ಗ್ರಾಮದ ರೇಷನ್ ಅಂಗಡಿ ಸಂಖ್ಯೆ 18 ರಲ್ಲಿ ಅಂತರ ಕಾಯ್ದುಕೊಂಡು ಪಡಿತರ ಹಂಚಿಕೆ ಮಾಡಲಾಗಿದೆ. ಪ್ರತಿಯೊಬ್ಬ ಗ್ರಾಹಕನಿಗೂ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಮಾಡಲಾಗಿದ್ದು, ಸೇಫ್ಟಿ ಮಾರ್ಕ್ ಬರೆದು ಚೇರ್ ಹಾಕಿ ಸಾಮಾಜಿಕ ಅಂತರ ಕಾಪಾಡಲಾಯಿತು.

ಜಿಲ್ಲೆಯಲ್ಲಿ ಹಲವೆಡೆ ಅಂತರ ಕಾಯ್ದುಕೊಳ್ಳದೆ ಗುಂಪಾಗಿ, ರೇಷನ್ ಖರೀದಿಗಾಗಿ ಜನ ಮುಗಿಬೀಳುವುದು ಸಾಮಾನ್ಯವಾಗಿದೆ‌. ಆದರೆ ಸೂಗೂರ ಗ್ರಾಮದಲ್ಲಿ ಸಾರ್ವಜನಿಕರು ಅಂತರ ಕಾಯ್ದುಕೊಂಡು ಇತರರಿಗೆ ಮಾದರಿಯಾ್ರು.

For All Latest Updates

ABOUT THE AUTHOR

...view details