ಕಲಬುರಗಿ: ಚಿಂಚೋಳಿ ತಾಲೂಕಿನ ನಾಗರಾಳ ಜಲಾಶಯದಲ್ಲಿ ನೋಡಲು ಅಪರೂಪದ ದೈತ್ಯ ಗಾತ್ರದ ಮೀನು ದೊರೆತಿದೆ. ಇದು ಯುರೋಪ್, ನ್ಯೂಜಿಲ್ಯಾಂಡ್‌ಗಳಂತಹ ದೇಶಗಳಲ್ಲಿ ಹೆಚ್ಚು ಕಂಡುಬರುವ 'ಈಲ್ ಮೀನು' ಮಾದರಿಯನ್ನು ಹೋಲುತ್ತಿದ್ದು ಕೂತೂಹಲ ಮೂಡಿಸಿತು.
ಅಪರೂಪದ ಮೀನು ಕಂದು ಮೈಬಣ್ಣ ಹೊಂದಿದೆ. ಸುಮಾರು 6 ಅಡಿ ಉದ್ದ 13 ಕೆ.ಜಿ ತೂಕವಿದೆ. ಮೀನುಗಾರ ಈಶ್ವರ್ ಎಂಬುವರ ಬಲೆಗೆ ಬಿದ್ದಿದೆ. ದೇಹದಲ್ಲಿ ಮುಳ್ಳುಗಳಿಲ್ಲ. ಇದೊಂದು ಅಪರೂಪದ ಮೀನು ಎಂದು ತಿಳಿಯದೆ ಸಾಮಾನ್ಯ ಮೀನಿನಂತೆ ಕತ್ತರಿಸಿ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಬಯಲು ಸೀಮೆಯಲ್ಲಿ ಇಂತಹ ಮೀನು ಸಿಗುವುದು ತುಂಬಾ ಅಪರೂಪ. ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಇಂಥದ್ದೊಂದು ಮೀನು ಕಾಣಿಸಿಕೊಂಡಿದ್ದು, ಸೇವನೆಗೆ ಯೋಗ್ಯವೇ ಎಂಬುವುದು ಸಂಶೋಧನೆಯಿಂದ ತಿಳಿದು ಬರಬೇಕಿದೆ.
ಈಲ್ ಮೀನು ಒಂದಿಷ್ಟು ಮಾಹಿತಿ.. :ನ್ಯೂಜಿಲೆಂಡ್ ಸಿಹಿನೀರಿನ ಈಲ್‌ಗಳು ನೋಡಲು ಒಂದೇ ರೀತಿ ಇರುತ್ತವೆ. ಆದರೆ ಇವುಗಳಲ್ಲಿ ಮೂರು ಜಾತಿಗಳಿವೆ.
- ಲಾಂಗ್ಫಿನ್ ಈಲ್: ಅಳಿವಿನಂಚಿಗೆ ತಲುಪಿದ ಸಂತತಿ ಇದು. ನ್ಯೂಜಿಲೆಂಡ್‌ನಲ್ಲಿ ಮಾತ್ರ ಕಂಡುಬರುತ್ತದೆ.
- ಶಾರ್ಟ್‌ಫಿನ್ ಈಲ್: ಅಳಿವಿನಂಚಿಗೆ ತಲುಪಿದ್ದರೂ ಅಳಿಯುವ ಬೆದರಿಕೆ ಇಲ್ಲ. ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಕೆಲವು ಪೆಸಿಫಿಕ್ ದ್ವೀಪಗಳಲ್ಲಿ ಸಾಮಾನ್ಯವಾಗಿವೆ.
- ಮಚ್ಚೆಯುಳ್ಳ ಈಲ್: ಆಸ್ಟ್ರೇಲಿಯಾದಲ್ಲಿ ಆಗಾಗ ಕಂಡುಬರುವ ಮೀನು.
ಇದನ್ನೂ ಓದಿ:ಅಬ್ಬಬ್ಬಾ 1 ಕೋಟಿ ಮೌಲ್ಯದ 22 ಭೋಲಾ ಮೀನುಗಳು ಬಲೆಗೆ.. ಏನಿದರ ವಿಶೇಷತೆ? ಏಕಿಷ್ಟು ಬೆಲೆ?