ಸೇಡಂ:ತಾಲೂಕಿನ ಕುರಕುಂಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಗೆ ಲಿಫ್ಟ್ ನೀಡುವ ನೆಪದಲ್ಲಿ ವ್ಯಕ್ತಿಯೋರ್ವ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆ ಇಳಿಹೊತ್ತಲ್ಲಿ ಸೇಡಂನಿಂದ ಆಟೋ ಮೂಲಕ ಕುರಕುಂಟಾ ಕ್ರಾಸ್ ಬಳಿ ಬಂದಿಳಿದಿದ್ದಾರೆ. ಸಂಜೆ ಬಸ್ ವ್ಯವಸ್ಥೆ ಇಲ್ಲದ ಕಾರಣ, ರಸ್ತೆಯಲ್ಲಿ ಆಕೆಯನ್ನು ಕಂಡ ವ್ಯಕ್ತಿಯೋರ್ವ ಸಹಾಯ ಮಾಡುವ ನೆಪವೊಡ್ಡಿ, ಬೈಕ್ ಹತ್ತಿಸಿಕೊಂಡಿದ್ದಾನೆ. ಸುಮಾರು 2-3 ಕಿ.ಮೀ. ದೂರದಲ್ಲಿರುವ ನಾಲಾ ಬ್ರಿಡ್ಜ್ ಬಳಿ ಮಹಿಳೆಗೆ ಚಾಕು ತೋರಿಸಿ, ಹೆದರಿಸಿ, ಬ್ರಿಡ್ಜ್ ಕೆಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.