ಕರ್ನಾಟಕ

karnataka

ETV Bharat / state

ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ:ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ - rigorous life imprisonment for rapist

ಅಪ್ರಾಪ್ತೆಯನ್ನು ಕಿಡ್ನಾಪ್​ ಮಾಡಿ ಅತ್ಯಾಚಾರವೆಸಗಿದ್ದ ಅಪರಾಧಿಗೆ ಕಲಬುರಗಿಯ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ..

rape case culprit sentenced to life imprisonment
ಕಠಿಣ ಜೀವಾವಧಿ ಶಿಕ್ಷೆ

By

Published : Jan 19, 2021, 3:16 PM IST

ಕಲಬುರಗಿ :ಅಪ್ರಾಪ್ತೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ವೆಸಗಿದ್ದ ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ
ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ
ಕಮಲಾಪುರ ಗ್ರಾಮದ ದೇವಾ @ ದೇವರಾಜ್ ಗೌರೆ ಶಿಕ್ಷೆಗೆ ಗುರಿಯಾದವನು. ಇದೇ ಗ್ರಾಮದ ಬಾಲಕಿಯ ಹಿಂದೆ ಅಲೆದಾಡುತ್ತಿದ್ದ ಆರೋಪಿ 2019ನೇ ಮೇ 7ರಂದು ಬಾಲಕಿಯನ್ನು ಅಪಹರಿಸಿ ಕಲಬುರಗಿಯ ಸಂಬಂಧಿಕರ ಮನೆಯೊಂದರಲ್ಲಿಟ್ಟು ಅತ್ಯಾಚಾರವೆಸಗಿದ್ದ. ಬಳಿಕ ಕಮಲಾಪುರದ ತನ್ನ ಮನೆಗೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಿದ್ದ. ನಂತರ ಮೇ19ರಂದು ಬಾಲಕಿ ಆತನಿಂದ ತಪ್ಪಿಸಿಕೊಂಡು ಬಂದು ತನ್ನ ಪೋಷಕರ ಮುಂದೆ ಎಲ್ಲವನ್ನು ಹೇಳಿಕೊಂಡಿದ್ದಳು. ಬಾಲಕಿಯ ತಂದೆ ಈ ಬಗ್ಗೆ ಕಮಲಾಪುರ ಠಾಣೆಗೆ ದೂರು ಸಲ್ಲಿಸಿದ್ದು, ದೂರಿನ ಆಧಾರದ ಮೇಲೆ ಸಿಪಿಐ ರಾಘವೇಂದ್ರ ವಿಚಾರಣೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗೋಪಾಲಪ್ಪ ಎಸ್. ಆಪಾಧಿತನಿಗೆ ಕಲಂ 366(A) ಐಪಿಸಿ ಅನ್ವಯ 10 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ದಂಡ, ಕಲಂ 376(2)(N) ಮತ್ತು ಕಲಂ 6 (ಪೋಸ್ಕೊ ಕಾಯ್ದೆ) ಅಡಿಯಲ್ಲಿ ಕಠಿಣ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ, ಕಲಂ 342 ಐಪಿಸಿ ಅಡಿಯಲ್ಲಿ ಒಂದು ವರ್ಷ ಕಠಿಣ ಶಿಕ್ಷೆ 10 ಸಾವಿರ ರೂಪಾಯಿ ದಂಡ, ಕಲಂ 506 ಐಪಿಸಿ ಅಡಿಯಲ್ಲಿ ಎರಡು ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಜಿಲ್ಲಾ ಕಾನೂನು ಪ್ರಾಧಿಕಾರ ಸಮಿತಿಯಿಂದ ನೊಂದ ಬಾಲಕಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (ಪೋಸ್ಕೋ) ಎಲ್​ ವಿ ಚಟ್ನಾಳಕರ್ ಸಾಕ್ಷಿ ಮಂಡಿಸಿದ್ದು, ವಿಶೇಷ ಸರ್ಕಾರಿ ಅಭಿಯೋಜಕಿ ಸಾವಿತ್ರಿ ಎಸ್ ಘಂಟಿಮಠ ವಾದ ಮಂಡಿಸಿದ್ದಾರೆ‌.

For All Latest Updates

TAGGED:

ABOUT THE AUTHOR

...view details