ಕರ್ನಾಟಕ

karnataka

ETV Bharat / state

ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಆಪಾದಿತನಿಗೆ 20 ವರ್ಷ ಶಿಕ್ಷೆ - kalaburagi Rape case

ಪ್ರಕರಣದ ವಾದ ಪ್ರತಿವಾದ ಆಲಿಸಿದ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಧೀಶರು ವಿವಿಧ ಐಪಿಸಿ ಸೆಕ್ಷನ್​ ಅಡಿ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Court
ನ್ಯಾಯಾಲಯ

By

Published : Dec 22, 2021, 10:59 PM IST

ಕಲಬುರಗಿ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಅಂಬರೀಶ ಹೂನಳ್ಳಿ ಶಿಕ್ಷೆಗೆ ಗುರಿಯಾದ ಆಪಾದಿತ. ಎರಡು ವರ್ಷದ ಹಿಂದೆ ಕಲಬುರಗಿ ಜಿಲ್ಲೆಯ ಅಪಜಲಪೂರ ಪೊಲೀಸ್​ ಠಾಣಾ ವ್ಯಾಪ್ತಿಯ ಕರಜಗಿ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅಂಬರೀಶ ಅಪಹರಿಸಿ ಬಂಧನದಲ್ಲಿಟ್ಟು ನಿರಂತರ ಅತ್ಯಾಚಾರವೆಸಗಿದ್ದ.

ಈ ಕುರಿತು ನೊಂದ ಬಾಲಕಿಯ ತಂದೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಸಿಪಿಐ ಮಹಾಂತೇಶ ಪಾಟೀಲ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾ ಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಾದ ಪ್ರತಿವಾದ ಆಲಿಸಿದ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಧೀಶರು ವಿವಿಧ ಐಪಿಸಿ ಸೆಕ್ಷನ್​​ ಅಡಿ ಆರೋಪಿಗೆ 20ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಓದಿ:ತಿಂಗಳಾಂತ್ಯದಲ್ಲಿ ವಿದ್ಯಾರ್ಥಿ ವೇತನ ಬಿಡುಗಡೆ: ಸಮಾಜ ಕಲ್ಯಾಣ ಸಚಿವರ ಅಭಯ

ABOUT THE AUTHOR

...view details