ಕಲಬುರಗಿ:ನಾಳೆ ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಹಬ್ಬ ಇರುವ ಹಿನ್ನೆಲೆ ಆರೋಪಿ ಸದ್ದಾಂ ಕುಟುಂಬಸ್ಥರು ಹೊಸ ಬಟ್ಟೆ ತೆಗೆದುಕೊಂಡು ಕಚೇರಿಗೆ ಆಗಮಿಸಿದ್ದರು. ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಆರೋಪಿ ಸದ್ದಾಂ ಸಿಐಡಿ ಕಸ್ಟಡಿಯಲ್ಲಿದ್ದಾನೆ. ಪ್ರಮುಖ ಆರೋಪಿ ದಿವ್ಯಾ ಹಾಗರಗಿಯ ಕಾರ್ ಚಾಲಕನಾಗಿ ಸದ್ದಾಂ ಕೆಲಸ ಮಾಡುತ್ತಿದ್ದ.
ಪಿಎಸ್ಐ ಪರೀಕ್ಷಾ ಅಕ್ರಮ.. ಸಿಐಡಿ ಕಚೇರಿಗೆ ಹೊಸ ಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಕುಟುಂಬ - ಮುಖ ಆರೋಪಿ ದಿವ್ಯಾ ಹಾಗರಗಿಯ ಕಾರ್ ಚಾಲಕನಾಗಿದ್ದ ಸದ್ದಾಂ
ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಆರೋಪಿ ಸದ್ದಾಂ ಸಿಐಡಿ ಕಸ್ಟಡಿಯಲ್ಲಿದ್ದಾನೆ. ಪ್ರಮುಖ ಆರೋಪಿ ದಿವ್ಯಾ ಹಾಗರಗಿಯ ಕಾರ್ ಚಾಲಕನಾಗಿ ಸದ್ದಾಂ ಕೆಲಸ ಮಾಡುತ್ತಿದ್ದ. ದಿವ್ಯಾ ಬಂಧನ ವೇಳೆ ಸದ್ದಾಂನನ್ನು ಸಹ ಬಂಧಿಸಲಾಗಿದೆ.
![ಪಿಎಸ್ಐ ಪರೀಕ್ಷಾ ಅಕ್ರಮ.. ಸಿಐಡಿ ಕಚೇರಿಗೆ ಹೊಸ ಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಕುಟುಂಬ accused Saddam family arrived at CID office with new cloth](https://etvbharatimages.akamaized.net/etvbharat/prod-images/768-512-15172606-thumbnail-3x2-bin.jpg)
ಸಿಐಡಿ ಕಚೇರಿಗೆ ಹೊಸ ಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಫ್ಯಾಮಿಲಿ
ಸಿಐಡಿ ಕಚೇರಿಗೆ ಹೊಸ ಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಫ್ಯಾಮಿಲಿ
ಸಿಐಡಿ ಅಧಿಕಾರಿಗಳ ಅನುಮತಿ ಮೇರೆಗೆ ಕುಟುಂಬಸ್ಥರು ಹೊಸ ಬಟ್ಟೆಯನ್ನು ಸದ್ದಾಂಗೆ ನೀಡಿದರು. ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣ ಬೆಳಕಿಗೆ ಬಂದ ಕೂಡಲೇ ತೆಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿ ಜೊತೆ ಕಾರ್ ಚಾಲಕ ಸದ್ದಾಂ ಕೂಡ ಇದ್ದ. ಆರೋಪಿ ದಿವ್ಯಾ ಬಂಧನದ ವೇಳೆ ಸಿಐಡಿ ಈತನನ್ನು ಬಂಧಿಸಿದೆ. ಅಕ್ರಮದಲ್ಲಿ ನೇರ ಪಾತ್ರ ಇಲ್ಲದಿದ್ರೂ ಆರೋಪಿಗಳು ತೆಲೆಮರೆಸಿಕೊಳ್ಳಲು ಸಹಕಾರ ನೀಡಿದ ಆರೋಪದ ಮೇಲೆ ಸದ್ದಾಂ ಬಂಧನವಾಗಿದೆ.
ಇದನ್ನೂ ಓದಿ:ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಸಚಿವರ ಸಹೋದರನ ಹೆಸರು : ಪ್ರತಿಕ್ರಿಯೆಗೆ ಸಿಎಂ ನಕಾರ